"ರತ್ನವರ್ಮ ಹೆಗಡೆ ಪ್ರಶಸ್ತಿಗೆ ಅಪ್ರಕಟಿತ ನಾಟಕ ಕೃತಿ ಆಹ್ವಾನ"
ತುಳುಕೂಟ ಕುಡ್ಲ ನಡೆಸುವ ರತ್ನವರ್ಮ ಹೆಗಡೆ ಪ್ರಶಸ್ತಿಗೆ ಅಪ್ರಕಟಿತ ನಾಟಕ ಕೃತಿಗಳನ್ನು ಆಹ್ವಾನಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗಡೆ ಯವರು ಕೊಡಮಾಡುವ ರತ್ನವರ್ಮ ಹೆಗ್ಗಡೆ ಯವರು ಹೆಗಡೆ ಪ್ರಶಸ್ತಿಯನ್ನು ಕುಡ್ಲದ ತುಳುಕೂಟದ ಮೂಲಕ ಕಳೆದ 45 ವರ್ಷಗಳಿಂದ ನೀಡಲಾಗುತ್ತಿದೆ.
à.4 ಶೀಟ್ ಅಳೆ ಯಲ್ಲಿ 60 ರಿಂದ 70 ಪುಟ ಒಳಗೆ ಕೃತಿ ಇರಬೇಕು ,ಹಾಳೆಯ ಒಂದೇ ಬದಿಯಲ್ಲಿ ಇರಬೇಕು, ನಾಟಕ ಸ್ವತಂತ್ರ ಕೃತಿ ಆಗಿರಬೇಕು, 2025 ರ ಮಕರ ಸಂಕ್ರಾಂತಿವರೆಗೆ ಪ್ರದರ್ಶನ ಗೊಳ್ಳಬಾರದು, ಪೌರಾಣಿಕ -ಸಾಮಾಜಿಕ -ಚಾರಿತ್ರಿಕ ಸೇರಿದಂತೆ ಯಾವ ಪ್ರಕಾರದಲ್ಲಿ ಇದ್ದರೂ ನಡೆಯುತ್ತದೆ. ಆದರೆ ಭಾಷಾಂತರ ಗೊಂಡ ಆಧಾರಿತ ಕೃತಿ ಸ್ವೀಕರಿಸುವುದಿಲ್ಲ.
ಲೇಖಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕವಾದ ಆಳೆಯಲ್ಲಿ ಬರೆದು ಲಗತ್ತಿಸಿರಬೇಕು .ಸ್ವಾತಂತ್ರ್ಯ ಕೃತಿ ಎಂದು ಸ್ವಯಂ ಘೋಷಿತ ಪ್ರಮಾಣ ಪತ್ರ ಇರಬೇಕು .10 ಬಾರಿ ಪ್ರಶಸ್ತಿಯನ್ನು ಪಡೆದವರು ಸ್ಪರ್ಧೆಗೆ ಅನರ್ಹರಾಗಿರುತ್ತಾರೆ. ನಾಟಕ ಕೃತಿಗಳನ್ನು 2025 ಜನವರಿ 15 ರೊಳಗೆ ಕಳುಹಿಸಬೇಕು ಬಿಸು ಪರ್ಬದoದು ಪ್ರಶಸ್ತಿ ಪ್ರಧಾನ ಮಾಡಲಾಗುವುದು .ಕೃತಿಗಳನ್ನು ವರ್ಕಾಡಿ ರವಿ, ಅಲೆ ವುರಾಯ ಸರಯು ಮನೆ ಅಂಚೆ, ಅಶೋಕನಗರ .ಕೋಡಿಕಲ್ ,ಮಂಗಳೂರು 06 ,ಈ ವಿಳಾಸಕ್ಕೆ ಕಳುಹಿಸಬೇಕು ಎಂದು ತುಳುಕೂಟದ ಅಧ್ಯಕ್ಷ ಹೇಮ ದಾಮೋದರ್ ನಿಸರ್ಗ ತಿಳಿಸಿದ್ದಾರೆ.
ವರದಿ : ಜೆ.ರಂಗನಾಥ ತುಮಕೂರು
0 Comments