ಹದಿನೈದು ಲಕ್ಷ ರೂ ಗಳ ವೆಚ್ಚದಲ್ಲಿ ಬ್ರಹ್ಮ ಯಕ್ಷರ ಜಿನಮಂದಿರ ನಿರ್ಮಾಣ'

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 "ಹದಿನೈದು ಲಕ್ಷ ರೂ ಗಳ ವೆಚ್ಚದಲ್ಲಿ ಬ್ರಹ್ಮ ಯಕ್ಷರ ಜಿನಮಂದಿರ ನಿರ್ಮಾಣ'


 ಹಾಸನ ಜಿಲ್ಲೆ ಬೇಲೂರು ತಾಲೂಕಿನ ಜೈನರ ಗುತ್ತಿಯಲ್ಲಿ 15 ಲಕ್ಷ ರೂಗಳ ವೆಚ್ಚದಲ್ಲಿ ಬ್ರಹ್ಮ ಎಚ್ಚರ ಜೀವನಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

 ಬೆಂಗಳೂರಿನ ಉದ್ಯಮಿ ವಿ.ಜೆ. ಬ್ರಹ್ಮದೇವಯ್ಯ, ತ್ರಿಶಾಲಾ ಬ್ರಹ್ಮದೇವಯ್ಯ ದಂಪತಿಗಳು ಭೂಮಿ ಪೂಜೆ ನೆರವೇರಿಸಿದರು .

ಕ್ಷೇತ್ರಪಾಲ ಪೂಜೆ, ವಾಸ್ತು ದೇವತೆ ಪೂಜೆ, ವಾಯು, ಮೇಘ, ಅಗ್ನಿ ಪೂಜೆಗಳೊಂದಿಗೆ ನೆರವೇರಿಸಿ,  ಕಳಸ ಸ್ಥಾಪನೆ ,ವಿವಿಧ ದ್ರವ್ಯಗಳೊಂದಿಗೆ ಭೂಮಿ ಪೂಜೆ ನೆರವೇರಿಸಿ ತೀರ್ಥಂಕರರಿಗೆ ಆರೋಗ್ಯ ಗಳನ್ನು ಸಮರ್ಪಿಸಿ ಶಾಂತಿ ಮಂತ್ರ ಪಠಿಸಲಾಯಿತು .

 ಮುನಿಶ್ರೀ ವೀರಸಾಗರ ಮಹಾರಾಜರು

ಆಶೀರ್ವಚನ ನೀಡಿ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ, ಆರೋಗ್ಯ, ಶಿಕ್ಷಣ ಸೇವೆ ನೀಡುವತ್ತ  ಹೆಜ್ಜೆ ಇಡಲಾಗಿದೆ ಎಂದರು.

 ಕಾರ್ಯಕ್ರಮದಲ್ಲಿ ಎ.ಬಿ .ಕಾಂತರಾಜು, ಶಶಿಕುಮಾರ್ ಧವನ್  ಜೈನ, ನಾಗಚಂದ್ರ, ಮನ್ಮಥರಾಜು, ರೇಖಾ ಧವನ್ , ಅಂಜನ,ಶಶಿಕುಮಾರ್ ,ನಿಶ್ಚಲ್ ,ಮಂಜುಳಾ, ಧನ ಕೀರ್ತಿ, ವಸುಮತಿ ,ಪದ್ಮ ಪ್ರಭು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಜೈನ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಶ್ರಾವಕ -ಶ್ರಾವಕಿಯರು ಉಪಸ್ಥಿತರಿದ್ದರು.

 

ವರದಿ : ಜೆ.ರಂಗನಾಥ ತುಮಕೂರು 


Post a Comment

0 Comments

Advertisement