ಮಂಗಳೂರಿನಿಂದ ಮೂಡುಬಿದಿರೆಗೆ ಆಗಮಿಸಿದ ಸರಕಾರಿ ಬಸ್ಸು : ಭಾರತೀಯ ರೈ.ಸೇನೆಯಿಂದ ಸ್ವಾಗತ
ಮೂಡುಬಿದಿರೆ: ಕಳೆದ ಹಲವಾರು ವರುಷಗಳಿಂದ ಸರಕಾರಿ ಬಸ್ಸು ಬೇಕೆಂದು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಪ್ರಯೋಜನವಾಗಿರಲಿಲ್ಲ ಆದರೆ ಕಾನೂನಾತ್ಮಕ ಹೋರಾಟ ನಡೆಯುತ್ತಿರುವಾಗಲೇ ಮಂಗಳೂರಿನಿಂದ ಮೂಡುಬಿದಿರೆಗೆ ಸರಕಾರಿ ಬಸ್ಸು ಬರುವಂತ್ತಾಯಿತು ಎಂದು ಭಾರತೀಯ ರೈತ ಸೇನೆ(ರಿ)ಯ ದ.ಕ ಜಿಲ್ಲಾ ಸಂಘದ ಅಧ್ಯಕ್ಷ ಹರಿಪ್ರಸಾದ್ ನಾಯಕ್ ಹೇಳಿದರು.
ಅವರು ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡಬಿದಿರೆ ವಿಶ್ವ ವಿಖ್ಯಾತ ಸಾವಿರ ಕಂಬದ ಬಸದಿಯನ್ನು ಸೇರಿ 18 ಬಸದಿ, 18 ಕೆರೆ, 18 ದೇವಸ್ಥಾನಗಳು, 11 ಚರ್ಚಗಳು, 15 ಮಸೀದಿಗಳು, 18 ಕೂಡು ರಸ್ತೆಗಳನ್ನು ಹೊಂದಿರುವ ಐತಿಹಾಸಿಕ ಪ್ರದೇಶ ವಾಗಿದೆ. ಇದಲ್ಲದೆ 145 ಶಿಕ್ಷಣ ಸಂಸ್ಥೆಗಳು, 2 ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮೂಡಬಿದಿರೆ ತಾಲೂಕಿನ ಜನತೆಗೆ ಸರ್ಕಾರದ ಸಾರಿಗೆ ಯೋಜನೆ ಗಳಾದ ಹಿರಿಯ ನಾಗರಿಕರಿಗೆ 25% ರಿಯಾಯಿತಿ ಬಸ್ಸು ಪಾಸ್ ಸಾರ್ವಜನಿಕರ ದಿನನಿತ್ಯದ ಕೆಲಸಕ್ಕಾಗಿ ಅನುಕೂಲವಾಗುವ ಸಾರಿಗೆ ಮಾಸಿಕ ಬಸ್ಸು ಪಾಸ್, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಅಂಗವಿಕಲರಿಗೆ ಉಚಿತ ಬಸ್ ಪಾಸ್, ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್, ಎಂಡೋಸಲ್ಫಾನ್ ಪೀಡಿತ ವ್ಯಕ್ತಿಗಳಿಗೆ ಉಚಿತ ಬಸ್ ಪಾಸ್, ಅಂಧರಿಗೆ ಬಸ್ ಪಾಸ್ ಪತ್ರಕರ್ತರಿಗೆ ಬಸ್ ಪಾಸ್ ನಿವೃತ್ತ ನೌಕರರ ಬಸ್ ಪಾಸ್, ವ್ಯವಸ್ಥೆ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘವು ಸಂಬಂಧಪಟ್ಟ ಇಲಾಖೆಗೆ ಹಲ ವಾರು ಮನವಿಗಳನ್ನು ನೀಡಿತ್ತು.
ಮನವಿಗೆ ಸಂಬಂಧಪಟ್ಟ ಇಲಾಖೆಯವರು ಸರಿಯಾಗಿ ಸ್ಪಂದಿಸದಿದ್ದಾಗ ನಮ್ಮ ಸಂಘವು ದಿನಾಂಕ 04/03/2023 ರಂದು ಕರ್ನಾಟಕ ಲೋಕಾಯುಕ್ತ ನ್ಯಾಯಲಕ್ಕೆ ದೂರು ಅರ್ಜಿ ಸಲ್ಲಿಸಲಾಗಿದೆ. ಸದಿ ದೂರು ಅರ್ಜಿಯು ನ್ಯಾಯಾಲಯದ ಪ್ರಕರಣ ಸಂಖ್ಯೆ: LOK/MYS/10393/2023 ರಂತೆ ಪ್ರಕರಣ ದಾಖಲಾಗಿ, ವಿಚಾರಣೆಯಲ್ಲಿರುತ್ತದೆ.
ಈ ಮಧ್ಯೆ ನಮ್ಮ ಸಂಘದ ನಿರಂತರ ಮನವಿಗೆ ಸ್ಪಂದಿಸಿದ ಕರ್ನಾಟಕ ಸರ್ಕಾರದ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿರುವ ಸೌಲಭ್ಯವನ್ನು ಮಂಗಳೂರು, ಮೂಡಬಿದಿರೆ, ಕಾರ್ಕಳ ಮಾರ್ಗವಾಗಿ ವ್ಯವಸ್ಥೆ ಮಾಡಿರುವುದರಿಂದ, ಸರ್ಕಾರದ ಸೌಲಭ್ಯವು ಮೂಡಬಿದಿರೆ ಜನತೆಗೆ ಸಿಗುವಂತಾಗಿದ್ದು ಇದರ ಫಲವಾಗಿ ಗುರುವಾರ ಬೆಳಿಗ್ಗೆ ಸರಕಾರಿ ಬಸ್ಸು ಮೂಡುಬಿದಿರೆಗೆ ಬಂದಾಗ ಸಂಘವು ಸ್ವಾಗತಿಸಿದೆ ಎಂದರು.
ಆದುದರಿಂದ ಲಾಭಿಯ ಮದ್ಯ ಕರ್ನಾಟಕ ಸರ್ಕಾರದ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿರುವ ಸೌಲಭ್ಯವನ್ನು ಮಂಗಳೂರು, ಮೂಡಬಿದಿರೆ, ಕಾರ್ಕಳದ ಜನರಿಗೆ ವ್ಯವಸ್ಥೆ ಮಾಡಿಕೊಟ್ಟಿರುವ ಮಾನ್ಯ ಘನ ಸರ್ಕಾರದ ಎಲ್ಲಾ ಜನ ಪ್ರತಿನಿಧಿಗಳಿಗೆ ನಮ್ಮ ಸಂಘದ ವತಿಯಿಂದ ಹೃದಯ ಪೂರ್ವಕ ಅಭಿನಂದನೆ ಗಳನ್ನು ಸಲ್ಲಿಸುತ್ತಿದ್ದೇವೆ ಎಂದರು
ಉಪಾಧ್ಯಕ್ಷ ಎಂ. ರಮೇಶ್ ಬೋಧಿ, ಸಂಘಟನಾ ಕಾರ್ಯದರ್ಶಿ ಶಿವರಾಮ್ ಜೆ ಶೆಟ್ಟಿ,
ಜೊತೆ ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಬೋವಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments