ಕ್ರೀಡಾ ಸ್ಫೂರ್ತಿಯೊಂದಿಗೆ ಆಟವಾಡಿ : ಸಂದೇಶ ಪಿ.ಜಿ

ಜಾಹೀರಾತು/Advertisment
ಜಾಹೀರಾತು/Advertisment

 ಕ್ರೀಡಾ ಸ್ಫೂರ್ತಿಯೊಂದಿಗೆ ಆಟವಾಡಿ : ಸಂದೇಶ ಪಿ.ಜಿ

ಮೂಡುಬಿದಿರೆ: ವೈಬ್ರೆಂಟ್ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಮೂಡುಬಿದಿರೆ, ನ್ಯೂ ವೈಬ್ರೆಂಟ್ ಪದವಿಪೂರ್ವ ಕಾಲೇಜು ಕಲ್ಲಬೆಟ್ಟು ಇದರ ವಾರ್ಷಿಕ ಕ್ರೀಡಾಕೂಟವು ಸ್ವರಾಜ್ಯ ಮೈದಾನದಲ್ಲಿ ನಡೆಯಿತು.


ಮೂಡುಬಿದಿರೆ ವೃತ್ತ ನಿರೀಕ್ಷಕ  ಸಂದೇಶ್ ಪಿ.ಜಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕ್ರೀಡೆ  ಮನುಷ್ಯನ ದೈಹಿಕ ಕ್ಷಮತೆ ಮತ್ತು  ಮಾನಸಿಕ ಆರೋಗ್ಯಕ್ಕೆ ಅಗತ್ಯವಾಗಿ ಬೇಕು. ಗೆದ್ದರೆ ಜಂಭ ಪಡದೆ, ಸೋತರೆ ಕುಗ್ಗದೆ ಕ್ರೀಡಾ ಸ್ಫೂರ್ತಿಯೊಂದಿಗೆ ಆಡುವ ಮೂಲಕ ಕ್ರೀಡೆಯು ಮುಂದಿನ ಜೀವನಕ್ಕೆ ದಾರಿದೀಪವಾಗಲಿ ಎಂದು ಹೇಳಿದರು.


ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎನ್. ವೆಂಕಟೇಶ್ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದು ಬಹಳ ಮುಖ್ಯ. ಅದೇ ರೀತಿ ಸರ್ವೋತೋಮುಖ ಅಭಿವೃದ್ಧಿಗೆ ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳು ಇದ್ದಾಗ ಮಾನಸಿಕ ಒತ್ತಡವನ್ನು ಒತ್ತಡವನ್ನು ತಡೆಯುವುದಲ್ಲದೆ ಶಿಸ್ತು, ಸಮಯಪ್ರಜ್ಞೆಯೂ ಜಾಗೃತವಾಗುತ್ತದೆ ಎಂದರು.

ಸನ್ಮಾನ : ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಮೂಡುಬಿದಿರೆ ಪೊಲೀಸ್ ವೃತ್ತ ನಿರಿಕ್ಷಕ ಸಂದೇಶ್ ಪಿ.ಜಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.


ಕಾಲೇಜಿನ ನಿರ್ದೇಶಕರು ಮತ್ತು ಟ್ರಸ್ಟಿಳಾದ  ಸುಭಾಷ್ ಝಾ, ಶರತ್ ಗೋರೆ, ಚಂದ್ರಶೇಖರ್ ರಾಜೇ ಅರಸ್,  ಯೋಗೇಶ್ ಬೆಡೇಕರ್,  ಮೊಹಮ್ಮದ್ ಭಾಷಾ ಉಪಸ್ಥಿತರಿದ್ದರು.


ಕಾಲೇಜಿನ ಆಡಳಿತ ಅಧಿಕಾರಿ ಅರುಣ್ ಡಿ ಸಿಲ್ವ ಸ್ವಾಗತಿಸಿ, ಕನ್ನಡ ಉಪನ್ಯಾಸಕ ನಿಕೇತ್ ಮೋಹನ್ ದಾಸ್ ಶೆಟ್ಟಿ  ಕಾರ್ಯಕ್ರಮವನ್ನು ನಿರೂಪಿಸಿದರು.


.ಕಾಲೇಜಿನ ಆಡಳಿತ ಅಧಿಕಾರಿ ಅರುಣ್ ಡಿ ಸಿಲ್ವ ಸ್ವಾಗತಿಸಿದರು. ಕ್ರೀಡಾಪಟುಗಳಾದ ಸ್ವಸ್ತಿಕ್, ಪ್ರಭಾಕರ್, ನಿರಂಜನ್, ಹರ್ಷಿಣಿ, ಪಲ್ಲವಿ ಮತ್ತು ವಿನಯ್ ಎಂಡಿ ಕ್ರೀಡಾ ಜ್ಯೋತಿಯನ್ನು ಬೆಳಗಿದರು.

ಕನ್ನಡ ಉಪನ್ಯಾಸಕ ನಿಕೇತ್ ಮೋಹನ್ ದಾಸ್ ಶೆಟ್ಟಿ  ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

0 Comments