*ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವ: ಮಕ್ಕಿಮನೆ ಕಲಾವೃಂದ ಬಳಗದಿಂದ ಸಾಂಸ್ಕ್ರತಿಕ ಕಾರ್ಯಕ್ರಮ*
ಅತಿಶಯ ಶ್ರೀ ಕ್ಷೇತ್ರ ಹೊಂಬುಜದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಮಹಾ ಸನ್ನಿಧಿಯಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಡಾ .ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿ ಯವರ ನೇತೃತ್ವದಲ್ಲಿ ಇಂದ್ರಧ್ವಜ ಮಹಾಮಂಡಲ ಆರಾಧನಾ ಮಹೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಶನಿವಾರ (16-11-2024) ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು ಎಲ್ಲರ ಮೆಚ್ಚುಗೆ ಪಡೆಯಿತು.
ಅನನ್ಯ ರಂಜನಿ, ನೀಶ್ಮಾ ಜೈನ್, ದೀಪ್ತಿ ಜೈನ್, ಅರೀಕಾ ಜೈನ್, ಜಯಂತಿ ಜೈನ್, ಅನಘ ಜೈನ್, ಅವನಿ ಜೈನ್, ಅರುಹ ಜೈನ್, ಈಯಾ ಜೈನ್ ಭಾಗವಹಿಸಿದರು.
ವಾಣಿಶ್ರೀ ಜೈನ್ ಕಾರ್ಯಕ್ರಮ ನಿರೂಪಿಸಿದರು. ರತ್ವಿಕ್ ಜೈನ್, ಪ್ರಪುಲ್ಲ ಜೈನ್, ಸನ್ಮತ್ ರಾಜ್ ಜೈನ್ ಸಹಕರಿಸಿದರು.
ಈ ಸಂದರ್ಭದಲ್ಲಿ
105 ಶಿವಮತಿ ಮಾತಾಜಿ ಮತ್ತು
ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿ ಹಾಗೂ ಶ್ರೀ ಕ್ಷೇತ್ರ ಸೋಂದಾ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿ ಯವರು ಉಪಸ್ಥಿತರಿದ್ದು ಎಲ್ಲ ಕಲಾವಿದರನ್ನು ಆಶಿರ್ವದಿಸಿ ಗೌರವಿಸಿದರು .
0 Comments