ತಾನು ಕಲಿತ ಶಾಲೆಗೆ ಭೇಟಿ ನೀಡಿದ ಆಂಧ್ರದ ರಾಜ್ಯಪಾಲರು
ಮೂಡುಬಿದಿರೆ: ತಾನು ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವ ಅಲಂಗಾರು ಸಂತ ಥೋಮಸ್ ಶಾಲೆಯ ವಿದ್ಯಾರ್ಥಿ ಪ್ರಸ್ತುತ ಅಂದ್ರ ಪ್ರದೇಶದ ರಾಜ್ಯಪಾಲ ಅಬ್ದುಲ್ ನಜಿರ್ ಅವರು ಮಂಗಳವಾರ ಶಾಲೆಗೆ ಭೇಟಿ ನೀಡಿ ಸ್ವಲ್ಪ ಸಮಯ ಮಕ್ಕಳೊಂದಿಗೆ ಕಳೆದರು.
ನಂತರ ಮಾತನಾಡಿದ ಅವರು ಶಿಕ್ಷಣವು ಮನಸ್ಸಿನ ತರಬೇತಿಯಾಗಿದ್ದು ವಿದ್ಯಾರ್ಥಿಗಳು ಭವಿಷ್ಯದ ಸಕಾರಾತ್ಮಕ ಕನಸು ಕಂಡರೆ ಮಾತ್ರ ಉತ್ತುಂಗ ಸ್ಥಾನಕ್ಕೆ ಏರಲು ಸಾಧ್ಯ ಎಂದರು.
ಶಾಲಾ ಸಂಚಾಲಕ ರೇ.ಫಾ. ಮೇಲ್ವಿನ್ ನೋರೋನ್ಹ ಅವರು ಮಾತನಾಡಿ ಅಬ್ದುಲ್ ನಜೀರ್ ಅವರು ಇನ್ನಷ್ಟು ಉನ್ನತ ಸ್ಥಾನಕ್ಕೆ ಏರಲಿ ಎಂದು ಶುಭಹಾರೈಸಿ ಅಭಿನಂದದಿಸಿದರು,
ಶಾಲಾ ಆಡಳಿತ ಮಂಡಳಿಯ ಸದಸ್ಯ ಪಿ.ಕೆ ಥೋಮಸ್ , ಅಲಂಗಾರು ಹೋಲಿ ರೋಸರಿ ಇಗರ್ಜಿಯ ಉಪಾಧ್ಯಕ್ಷ ಎಡ್ವಾರ್ಡ್ ಸೇರವೊ , ಆಯೋಗ ಮುಖ್ಯಸ್ಥ ರಾಜೇಶ್ ಕಡಲಕೆರೆ , ರಾಜ ಡಿಸೋಜಾ , ಜಾನೆಟ್ ಮಿರಾಂದ , ಶಾಲಾ ಮುಖ್ಯೋಪಾಧ್ಯಾಯಿನಿ ಸಿಲ್ವಿಯ ಡೇಸಾ , ಅಲ್ಫೋನ್ಸ್ ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು
0 Comments