ಅಳಿಯೂರು ಸರಕಾರಿ ಪ.ಪೂ.ಕಾಲೇಜಿನ ನೂತನ ಕೊಠಡಿಗಳಿಗೆ ಶಿಲಾನ್ಯಾಸ
ಮೂಡುಬಿದಿರೆ: ತಾಲೂಕಿನ ಅಳಿಯೂರಿಗೆ ಮಂಜೂರಾಗಿರುವ ಸರಕಾರಿ ಪ.ಪೂ. ಕಾಲೇಜಿಗೆ ವಿವೇಕ ಯೋಜನೆಯಡಿ ರೂ 1ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕೊಠಡಿಗಳಿಗೆ ಶಾಸಕ ಉಮನಾಥ್ ಎ ಕೋಟ್ಯಾನ್ ಸೋಮವಾರ ಶಿಲಾನ್ಯಾಸಗೈದರು.
ಇದೇ ಸಂದರ್ಭದಲ್ಲಿ ಸಹಸ್ರ ಪೌಂಡೇಶನ್ ವತಿಯಿಂದ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಸೌರಶಕ್ತಿ ಸ್ಯಾನಿಟರಿ ಪ್ಯಾಡ್ ಮೆಷಿನನ್ನು ಶಾಲೆಗೆ ಹಸ್ತಾಂತರಿಸಲಾಯಿತು.
ಪ್ರವೀಣ್ ಭಟ್ ಅಳಿಯೂರು ಅವರು ಶಿಲಾನ್ಯಾಸದ ವೈದಿಕ ಕಾರ್ಯ ನಡೆಸಿದರು.
ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷ ಗಣೇಶ್ ಬಿ.ಅಳಿಯೂರು, ಪ್ರೌಢಶಾಲಾ ಎಸ್ ಡಿಎಂಸಿ ಅಧ್ಯಕ್ಷ ಪ್ರದೀಪ್ ಕುಮಾರ್, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲೋಕೇಶ್, ಶಾಲಾ ದಾನಿಗಳು, ಶಿಕ್ಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.
0 Comments