ವರಂಗ ಫ್ರೆಂಡ್ಸ್ ಕ್ರಿಕೆಟರ್ಸ್(ರಿ ) ವತಿಯಿಂದ ಸನ್ಮಾನ
ವರಂಗ ಫ್ರೆಂಡ್ಸ್ ಕ್ರಿಕೆಟರ್ಸ್(ರಿ )24.11.2024 ರಂದು ವೀರ ಸಾವರ್ಕರ್ ಮೈದಾನ ಮುನಿಯಾಲ್ ವರಂಗ,ಆಯೋಜಿಸಲಾದ ಕ್ರಿಕೆಟ್ ಪಂದ್ಯಾಟದ ಸಮರೂಪ ಸಮಾರಂಭದಲ್ಲಿ, ವರಂಗದ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಸುವರ್ಣ ಕರ್ನಾಟಕ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ರಂಗಭೂಮಿ ಕಲಾವಿದರು ವಿಆರ್ ಸತೀಶ್ ಆಚಾರ್ಯ ವರಂಗ, ಹಾಗೂ ಹತ್ತನೇ ತರಗತಿಯಲ್ಲಿ 98% ಅಂಕವನ್ನು ಗಳಿಸಿದ ಅನುಷಾ ನಾಯಕ್ ವರಂಗ, ರಾಜ್ಯ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದ ಆರಾಧ್ಯ ಪೂಜಾರ್ತಿ ವರಂಗ, ಈ ಮೂರು ಜನ ಸಾಧನೇ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಿಸಿದ ವರಂಗ ಫ್ರೆಂಡ್ಸ್ ಕ್ರಿಕೆಟರ್ಸ್ ಈ ಒಂದು ಕಾರ್ಯಕ್ರಮದಲ್ಲಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಗೋಪಿನಾಥ್ ಭಟ್, ಮುನಿಯಾಲು, ಸುನಿಲ್ ಕಾರ್ಕಳ, ಅವಿನಾಶ್ ಶೆಟ್ಟಿ ಕಾರ್ಕಳ, ಪ್ರಶಾಂತ್ ಜೈನ್ ವರಂಗ, ಗಫೋರ್ ಅಜೆಕಾರ್ ಹಾಗೂ ವರಂಗ ಫ್ರೆಂಡ್ಸ್ ಅಟಗಾರರು ಹಾಗೂ ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತಿ ಇದ್ದರು.
0 Comments