ಉಚಿತ ಗರ್ಭಕಂಠ, ಕ್ಯಾನ್ಸರ್ ತಪಾಸಣೆ

ಜಾಹೀರಾತು/Advertisment
ಜಾಹೀರಾತು/Advertisment

 ಉಚಿತ ಗರ್ಭಕಂಠ, ಕ್ಯಾನ್ಸರ್ ತಪಾಸಣೆ

ಮೂಡುಬಿದಿರೆ: ಇನ್ನರ್ ವ್ಹೀಲ್‌ಕ್ಲಬ್ ಮೂಡುಬಿದಿರೆ, ಪವರ್ ಫ್ರೆಂಡ್ಸ್ ಬೆದ್ರ, ಜುಲೇಖಾ ಯೆನೆಪೋಯ ಇನ್ಸಿಟ್ಯೂಟ್ ಆಫ್ ಆಂಕೋಲಜಿ ಹಾಗೂ ಯೆನೆಪೋಯ ಡೀಮ್ಡ್  ಟು.ಬಿ.ಯುನಿವರ್ಸಿಟಿ ಮಂಗಳೂರು ಇವುಗಳ ಸಹಯೋಗದಲ್ಲಿ ಮಹಿಳೆಯರಿಗೆ ಉಚಿತ ಗರ್ಭಕಂಠ ಮತ್ತು ಸ್ತನ ತಪಾಸಣೆ ಮತ್ತು ಸಾರ್ವಜನಿಕರಿಗೆ ಉಚಿತ ದಂತ ತಪಾಸಣೆ ಮತ್ತು ದಂತ ಚಿಕಿತ್ಸಾ ತಪಾಸಣಾ ಶಿಬಿರವು ಪುತ್ತಿಗೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಬಿಂದಿಯಾ ಎಸ್ .ಶೆಟ್ಟಿ ಅವರು ದೀಪ ಬೆಳಗಿಸಿ  ಶಿಬಿರವನ್ನು ಉದ್ಘಾಟಿಸಿದರು.

 ಪವರ್ ಫ್ರೆಂಡ್ಸ್ ನ ಅಧ್ಯಕ್ಷ ವಿನಯ ಕುಮಾರ್,  ಲಯನ್ಸ್ ಕ್ಲಬ್ ನ ಅಧ್ಯಕ್ಷ  ಬೋನವೆಂಚರ್ ಮಿನೇಜಸ್,  ಯೆನೆಪೋಯ ಡೆಂಟಲ್ ಕ್ಲಿನಿಕ್ ನ ಸರ್ಜನ್  ಡಾ. ಅಝೀಜ್,  ರೋಟರಿ ಮಿಡ್ ಟೌನ್ ನ ಸದಸ್ಯ ಪ್ರಸಾದ್  ಭಂಡಾರಿ ಈ ಸಂದರ್ಭದಲ್ಲಿದ್ದರು. 


ಪವರ್ ಫ್ರೆಂಡ್ಸ್ ನ ಕಾರ್ಯದರ್ಶಿ ಸುಧಾಕರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.  ಇನ್ನರ್ ವ್ಹೀಲ್ ಕ್ಲಬ್ ನ ಕಾರ್ಯದರ್ಶಿ 

ಡಾ. ಸೀಮಾ ಸುದೀಪ್ ವಂದಿಸಿದರು.

Post a Comment

0 Comments