ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕೃತಿಕ ವೈಭವ; ಕರುನಾಡ ಕಲಾ ಸಿರಿ ಪ್ರಶಸ್ತಿಯಿಂದ ಕಿರುತೆರೆ ನಟಿ ತನ್ವಿ ರಾವ್ (ಕೀರ್ತಿ) ಗೆ ಸನ್ಮಾನ.

ಜಾಹೀರಾತು/Advertisment
ಜಾಹೀರಾತು/Advertisment

 ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕೃತಿಕ ವೈಭವ; ಕರುನಾಡ ಕಲಾ ಸಿರಿ ಪ್ರಶಸ್ತಿಯಿಂದ ಕಿರುತೆರೆ ನಟಿ ತನ್ವಿ ರಾವ್ (ಕೀರ್ತಿ) ಗೆ ಸನ್ಮಾನ.

ಮಂಗಳೂರು: - 

 ಮಠದಕಣಿ ಶ್ರೀ ವೀರಭದ್ರ - ಮಹಾಮಾಯಿ ದೇವಸ್ಥಾನದ ಆಶ್ರಯದಲ್ಲಿ  ಮಹಾಮಾಯಿ ಫ್ರೆಂಡ್ಸ್ ಎಸೋಸಿಯೇಶನ್ 47ನೇ ನವರಾತ್ರಿ ಉತ್ಸವದ ಅಂಗವಾಗಿ  ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ  ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ 

 ಭಾನುವಾರ (6-10-2024)  ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮವು ಪ್ರಖ್ಯಾತ ಟಿವಿ ರಿಯಾಲಿಟಿ ಶೋಗಳಲ್ಲಿ ಹೆಜ್ಜೆ ಹಾಕಿದ  ಕಲಾವಿದರು ಕಲಾ ಪ್ರದರ್ಶನ ನೀಡಿದರು.



 ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಿರುತೆರೆ ನಟಿ, ಭರತನಾಟ್ಯ ಕಲಾವಿದೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ತನ್ವಿ ರಾವ್ ರವರ ಕಲಾ ಸಾಧನೆಯನ್ನು ಗುರುತಿಸಿ ಮಕ್ಕಿಮನೆ ಕಲಾವೃಂದ  "ಕರುನಾಡ ಕಲಾ ಸಿರಿ"  ಪ್ರಶಸ್ತಿ ನೀಡುವುದರ ಮೂಲಕ ಅವರನ್ನು ಗೌರವಿಸಿದರು.


 

ಈ ಸಂದರ್ಭದಲ್ಲಿ ಮೂಡುಬಿದಿರೆಯ ಖ್ಯಾತ ವಕೀಲರಾದ ಶ್ವೇತಾ ಜೈನ್, ಮಂಗಳೂರಿನ ಅಶೋಕ್ ಎ,  ಸಂಪತ್ ಜೈನ್ ಮುಂಡೂರು, ಬಾಲಕೃಷ್ಣ ಕಲ್ಬಾವಿ, ಲೋಕಯ್ಯ ಶೆಟ್ಟಿಗಾರ, ವಿಶ್ವನಾಥ್ ಶೆಟ್ಟಿಗಾರ , ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು  ಉಪಸ್ಥಿತರಿದ್ದರು. ನೃತ್ಯ ನಿರ್ದೇಶಕರಾದ 

ಶ್ರಾವ್ಯ ಕಿಶೋರ್ , ಪಾರ್ಥನಾ  ರೋಹಿತ್, ರಿಮಾ ಜಗನ್ನಾಥ್ , ವಂಸತ್ ನಾಯ್ಕ್,  ಆಶಿಶ್ ಅಂಚನ್ ಅವರನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  

ಶ್ರೇಯಾ ದಾಸ್ ಹಾಗೂ ಅರ್ಚಿತ್ ಜೈನ್ ನಿರೂಪಿಸಿದರು.

ಗೌರವ್ ಶೆಟ್ಟಿಗಾರ, 

ಕೃತಿ ಸನಿಲ್, ಪೆರಣಾ ಜೆ,   ಶ್ರೇಯಾ ಭಟ್ , ಅಪೇಕ್ಷಾ ಎ , ಸಾನಿಧ್ಯ ಜೈನ್ , ನಯನಾ ಮೊದಲಾದವರು ಸಹಕರಿಸಿದರು.

Post a Comment

0 Comments