ತುಳುನಾಡ ಜವನೆರ್ ಬೆದ್ರ ಟ್ರಸ್ಟ್ ನಿಂದ ಕ್ಯಾನ್ಸರ್ ಚಿಕಿತ್ಸೆಗೆ ಸಹಾಯಧನ
ಮೂಡುಬಿದಿರೆ: ತುಳುನಾಡ ಜವನೆರ್ ಬೆದ್ರ ಟ್ರಸ್ಟ್ (ರಿ) ಇದರ 2ನೇ ಸೇವಾ ಯೋಜನೆಯನ್ನು ಕ್ಯಾನ್ಸರ್ ಗೆ ತುತ್ತಾಗಿರುವ ಬೆಳುವಾಯಿ ಶಾಂತಿನಗರ ನಿವಾಸಿ ದೀಪಿಕಾ ಅವರ ಚಿಕಿತ್ಸೆಗಾಗಿ ರೂ 45,000ದ ಚೆಕ್ ನ್ನು ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಅವರ ಮೂಲಕ ಭಾನುವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು.
ತುಳುನಾಡ ಜವನೆರ್ ಬೆದ್ರದ ಅಧ್ಯಕ್ಷ ಹರೀಶ್ ಕುಲಾಲ್ ಕಾರ್ಯದರ್ಶಿ ಪ್ರಸಾದ್, ಜೊತೆ ಕಾರ್ಯದರ್ಶಿ ಹರಿ ಪ್ರಸಾದ್, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಸದಸ್ಯರುಗಳಾದ ಸುಮಂತ್, ಸುರೇಶ್, ಶಿವರಾಜ್, ಪ್ರಸನ್ನ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments