77ನೇ ದಸರಾ ಸಾಹಿತ್ಯ ಸಾಂಸ್ಕೃತಿಕ ಉತ್ಸವ : ಸಾಧಕರಿಗೆ ಗೌರವ
ಮೂಡುಬಿದಿರೆ: ಸಮಾಜ ಮಂದಿರ ಸಭಾದ ಆಶ್ರಯದಲ್ಲಿ ನಡೆಯುತ್ತಿರುವ 77ನೇ ದಸರಾ ಸಾಹಿತ್ಯ ಸಾಂಸ್ಕೃತಿಕ ಉತ್ಸವದ ಮೂರನೇ ದಿನದಂದು ಬಂಟ್ವಾಳ ಡಾ.ತುಕಾರಾಮ ಪೂಜಾರಿ ಅವರು 'ನಮ್ಮ ಹೆಮ್ಮೆಯ ಅಬ್ಬಕ್ಕ' ಕುರಿತು ಉಪನ್ಯಾಸ ನೀಡಿದರು.
ಚೌಟರ ಅರಮನೆಯ ಕುಲದೀಪ ಎಂ.ಅಧ್ಯಕ್ಷತೆ ವಹಿಸಿದ್ದರು.
ಸಾಧಕ ಆರು ಮಂದಿಗೆ ಗೌರವ : ಕಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ (ರಿ.) ಮೂಡುಬಿದಿರೆ ಪರವಾಗಿ ಅಧ್ಯಕ್ಷ ಕೆ.ಶ್ರೀಪತಿ ಭಟ್ (ಸಾಂಸ್ಕೃತಿಕ),ಧನಂಜಯ ಮೂಡುಬಿದಿರೆ ( ಪತ್ರಿಕೋದ್ಯಮ, ಕಲೆ), ಅಂಡಾರು ಗುಣಪಾಲ ಹೆಗ್ಡೆ (ಶೈಕ್ಷಣಿಕ), ಸುಜಾತಾ ಶೆಟ್ಟಿ (ರಂಗಭೂಮಿ), ಅನಿತಾ ಶೆಟ್ಟಿ (ಸಾಹಿತ್ಯ), ಅಬ್ದುಲ್ ಸಲಾಂ (ಕಲೆ, ಸಾಹಿತ್ಯ) ಅವರನ್ನು ಗುರುತಿಸಿ ಗೌರವಿಸಲಾಯಿತು.
ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯಚಂದ್ರ ಜೈನ್, ಉಪಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಸುರೇಶ್ ಪ್ರಭು, ಸದಸ್ಯರಾದ ಕೆ.ಆರ್.ಪಂಡಿತ್, ಸಿ.ಹೆಚ್.ಗಫೂರ್, ಎಂ.ಎಸ್.ಕೋಟ್ಯಾನ್, ಪಿ.ಜಯರಾಜ್ ಕಂಬ್ಳಿ ಉಪಸ್ಥಿತರಿದ್ದರು.
ಡಾ.ಪುಂಡಿಕಾಯಿ ಗಣಪಯ್ಯ ಭಟ್ ಸ್ವಾಗತಿಸಿ ಅತಿಥಿಯನ್ನು ಪರಿಚಯಿಸಿದರು. ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ ಸಾಧಕರನ್ನು ಪರಿಚಯಿಸಿದರು.
0 Comments