ಖಾವಂದರಿಂದ ಕೀರ್ತಿ ಕಿರೀಟ ಪಡೆದುಕೊಂಡ ಬೋರುಗುಡ್ಡೆಯ ಭಜನಾ ತಂಡ:ಸಮಾಜ ಸೇವೆಯಲ್ಲೂ ಎತ್ತಿದ ಕೈ ಈ ಭಜನಾ ತಂಡ

ಜಾಹೀರಾತು/Advertisment
ಜಾಹೀರಾತು/Advertisment

 ಖಾವಂದರಿಂದ ಕೀರ್ತಿ ಕಿರೀಟ ಪಡೆದುಕೊಂಡ ಬೋರುಗುಡ್ಡೆಯ ಭಜನಾ ತಂಡ:ಸಮಾಜ ಸೇವೆಯಲ್ಲೂ ಎತ್ತಿದ ಕೈ ಈ ಭಜನಾ ತಂಡ


ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇವರ ವತಿಯಿಂದ ನಡೆದ 26ನೇ ವರ್ಷದ ಭಜನಾ ತರಬೇತಿ ಕಮ್ಮಟದ ಭಜನೋತ್ಸವದಲ್ಲಿ 2024ರ ಸಾಲಿನ ಈ ವರ್ಷದ ಮೂಡಬಿದ್ರಿ ತಾಲೂಕಿನ ಪ್ರತಿಷ್ಠಿತ ಭಜನಾ ಮಂಡಳಿ "ಪರಶುರಾಮ ಕುಣಿತ ಭಜನಾ ಮಂಡಳಿ ಬೋರುಗುಡ್ಡೆ" ತಂಡವು "ಸಾಧಕ ಮಂಡಳಿ ಪ್ರಶಸ್ತಿ" ಪಡೆದು ಮೂಡಬಿದಿರೆ ತಾಲೂಕಿನ "ಸಾಧಕ ಪುರಸ್ಕಾರ ಮಂಡಳಿ " ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಕಳೆದ ಹಲವಾರು ವರ್ಷಗಳಿಂದ ಬೋರುಗುಡ್ಡೆ ಎಂಬಲ್ಲಿ ಭಜನಾ ತಂಡವನ್ನು ರಚಿಸಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಮನೆಯ ಶುಭ ಕಾರ್ಯಕ್ರಮಗಳ ಸತ್ಸಂಗ ಸಮಾರಂಭದಲ್ಲಿ ಈ ಭಜನಾ ತಂಡವು ತಮ್ಮ ಕುಣಿತ ಭಜನೆ ಯನ್ನು ನೀಡುತ್ತಾ ಬಂದಿದೆ. ಹಲವಾರು ಪುರಸ್ಕಾರಗಳು, ಬಹುಮಾನಗಳನ್ನು ಬಾಚಿಕೊಂಡಿರುವ ಈ ಪರಶುರಾಮ ಭಜನಾ ಮಂಡಳಿಯು ಈಗ ಧರ್ಮಸ್ಥಳದ ಖಾವಂದರ ಕೈಯಿಂದಲೇ ಪ್ರಶಸ್ತಿ ಸ್ವೀಕರಿಸುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಜನೆಗೆ ವಿಶೇಷ ಪ್ರಾತಿನಿತ್ಯ ನೀಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು 5000ಕ್ಕಿಂತಲೂ ಅಧಿಕ ತಂಡಗಳೊಂದಿಗೆ ಭಜನಾ ಕಮ್ಮಟವನ್ನು ನಡೆಸಿದ್ದು ಈ ಕಾರ್ಯಕ್ರಮದಲ್ಲಿ ಪರಶುರಾಮ ಭಜನಾ ಮಂಡಳಿಯು ಸಾಧಕ ತಂಡ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ.


ಕೇವಲ ಭಜನೆ ಮಾತ್ರವಲ್ಲದೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಈ ತಂಡವು ಭಾಗವಹಿಸಿರುವುದು ಶ್ಲಾಘನೀಯ.

Post a Comment

0 Comments