15 ವರ್ಷಗಳ ನಂತರ ನನಸಾಯಿತು ಕನಸು:ಜಿಹಾದಿಗಳಿಂದ ಹತನಾಗಿದ್ದ ಜಗದೀಶ್ ಪೂಜಾರಿ ಕುಟುಂಬಕ್ಕೆ ಮನೆ ನಿರ್ಮಿಸಿದ ಶಾಸಕ ಭರತ್ ಶೆಟ್ಟಿ ಮತ್ತು ಯುವಮೋರ್ಚಾ ತಂಡ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಯಾರ್ ವ್ಯಾಪ್ತಿಯ ಒಳಚ್ಚಿಲ್ ನಿವಾಸಿಯಾಗಿರುವ ಮೃತ ಹಿಂದು ಕಾರ್ಯಕರ್ತ ಜಗದೀಶ್ ಪೂಜಾರಿಯವರ ಕುಟುಂಬಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ತಂಡ ನಿರ್ಮಿಸಿರುವ ಹೊಸ ಸುಸಜ್ಜಿತ ಮನೆಯನ್ನು ಹಸ್ತಾಂತರಿಸಿದರು ಸುಮಾರು.
15 ವರ್ಷಗಳ ಹಿಂದೆ ಅಡ್ಯಾರ್ ಪ್ರದೇಶವು ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. ಈ ಸಂದರ್ಭದಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಇಬ್ಬರು ಬುರ್ಖಾ ಧರಿಸಿ ಅಡ್ಡ ಮತದಾನಕ್ಕೆ ಮುಂದಾಗಿದ್ದರು. ಇದನ್ನು ಬಹಿರಂಗವಾಗಿ ತಡೆದಿದ್ದ ಅಂದಿನ ಬಿಜೆಪಿ ಕಾರ್ಯಕರ್ತ ಬೂತ್ ಏಜೆಂಟ್ ಆಗಿದ್ದ ಜಗದೀಶ್ ಪೂಜಾರಿಯವರು ಸವಾಲು ಹಾಕಿ ಈ ಅಕ್ರಮವನ್ನು ತಡೆದಿದ್ದರು. ಇದರಿಂದ ಕುಪಿತಗೊಂಡಿದ್ದ ಜಿಹಾದಿ ಮನಸ್ಥಿತಿಯ ತಂಡ ಅದೇ ದಿನ ರಾತ್ರಿ ಜಗದೀಶ್ ಪೂಜಾರಿಯವರನ್ನು ಹತ್ಯೆಗೈದಿದ್ದರು. ತಲವಾರು ದಾಳಿಗೆ ಭೀಕರವಾಗಿ ಗಾಯಗೊಂಡಿದ್ದ ಜಗದೀಶ್ ಪೂಜಾರಿ ಪಕ್ಷದ ಗೆಲುವಿಗಾಗಿ ಹತರಾಗಿದ್ದರು.
ಇತ್ತೀಚೆಗೆ ಅಂದರೆ ವರ್ಷದ ಹಿಂದೆ ಶಾಸಕ ಡಾ.ಭರತ್ ಶೆಟ್ಟಿ ಅವರು ಒಳಚಿಲ್ ಪ್ರದೇಶಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಜಗದೀಶ್ ಪೂಜಾರಿಯ ಕುಟುಂಬಸ್ಥರ ಜೊತೆಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅವರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಮತ್ತು ಮನೆ ನಿರ್ಮಾಣದ ಕನಸನ್ನು ಹೊಂದಿಕೊಂಡಿದ್ದಾರೆ ಎಂಬ ವಿಷಯವನ್ನು ಅರಿತಿದ್ದರು. ಕೂಡಲೇ ಕಾರ್ಯೋನ್ಮುಖರಾದ ಶಾಸಕರು ಯುವ ಮೋರ್ಚಾ ತಂಡವನ್ನು ಒಟ್ಟುಗೂಡಿಸಿ ಜಗದೀಶ್ ಪೂಜಾರಿಯವರಿಗೆ ಮನೆ ನಿರ್ಮಿಸುವ ಸಂಕಲ್ಪವನ್ನು ತೊಟ್ಟಿದ್ದರು. ಮತ್ತು ಕೆಲವೇ ದಿನಗಳಲ್ಲಿ ಮನೆ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿದ್ದರು. ಈಗ ಶಾಸಕರು ಮತ್ತು ಯುವ ಮೋರ್ಚಾ ತಂಡ ಜಗದೀಶ್ ಪೂಜಾರಿಯವರಿಗೆ ಸುಸಜ್ಜಿತವಾದ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಿದೆ. ಈ ಮೂಲಕ ಪಕ್ಷಕ್ಕಾಗಿ ಮಡಿದ ಕಾರ್ಯಕರ್ತನಿಗೆ ಅತಿದೊಡ್ಡ ಗೌರವವನ್ನು ಶಾಸಕರು ಹಾಗೂ ಯುವಮೋರ್ಚಾ ತಂಡ ನೀಡಿದ್ದಾರೆ.
ಮನೆ ಹಸ್ತಾಂತರದ ಸಂದರ್ಭದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಅವರೊಂದಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ, ಮಂಡಲ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ, ಮನಪಾ ಸದಸ್ಯೆ ಶ್ವೇತ ಪೂಜಾರಿ, ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ನಂದನ್ ಮಲ್ಯ, ಉಪಾಧ್ಯಕ್ಷರಾದ ಆಶ್ರಿತ್ ನೋಂಡಾ, ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಸದಸ್ಯರಾದ ಸಂಜೀತ್ ಶೆಟ್ಟಿ, ಮಂಡಲ ಯುವಮೋರ್ಚಾ ಅಧ್ಯಕ್ಷ ರಕ್ಷಿತ್ ಪೂಜಾರಿ, ಜಿಲ್ಲೆಯ ಮತ್ತು ಮಂಡಲದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments