ಒಡಿಶಾ ರಾಜ್ಯದಲ್ಲಿ ಕಟೀಲ್ ಭರ್ಜರಿ ಪ್ರವಾಸ:ಗ್ರಾಮ ಗ್ರಾಮಗಳಿಗೆ ತಿರುಗಾಟ ನಡೆಸಿ ಬಿಜೆಪಿ ಸದಸ್ಯತ್ವ ಗುರಿ ಮುಟ್ಟಲು ಪಣ
ಭಾರತೀಯ ಜನತಾ ಪಾರ್ಟಿಯ ಸದಸ್ಯತ್ವ ಅಭಿಯಾನವು ರಾಷ್ಟ್ರಮಟ್ಟದಲ್ಲಿ ಭರ್ಜರಿಯಾಗಿ ನಡೆಯುತ್ತಿದ್ದು ಈ ನಿಮಿತ್ತ ಒಡಿಶಾ ರಾಜ್ಯಕ್ಕೆ ಕರ್ನಾಟಕದ ಮಾಜಿ ಬಿಜೆಪಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರನ್ನು ಉಸ್ತುವಾರಿಯನ್ನಾಗಿ ರಾಷ್ಟ್ರೀಯ ಬಿಜೆಪಿ ನೇಮಿಸಿತ್ತು. ಈ ನಿಮಿತ್ತ ಒಡಿಶಾ ರಾಜ್ಯಕ್ಕೆ ತೆರಳಿದ ನಳಿನ್ ಕುಮಾರ್ ಕಟೀಲ್ ರವರನ್ನು ಒಡಿಶಾ ರಾಜ್ಯದ ಬಿಜೆಪಿ ನಾಯಕರು ಆತ್ಮೀಯವಾಗಿ ಸ್ವಾಗತಿಸಿದರು. ನಳಿನ್ ಕುಮಾರ್ ಕಟೀಲ್ ರವರು ಒಡಿಶಾದ ಮಾಜಿ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಸಂಸದರು ಆಗಿರುವ ಬಸಂತ್ ಕುಮಾರ್ ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಒಡಿಶಾದ ನೌಪಾಡ ಜಿಲ್ಲೆಯ ಖಾರಿಯಾರ್ ವಿಧಾನಸಭಾ ಕ್ಷೇತ್ರ ಹಾಗೂ ನೌಪಾಡ ಜಿಲ್ಲೆಯ ವಿನೋಪುರ್ ವ್ಯಾಪ್ತಿ ಮತ್ತು ಸೀನಪಾಳಿ ಮತ್ತು ಭವಾನಿ ಪಾಟ್ನಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಸದಸ್ಯತ್ವ ಅಭಿಯಾನವನ್ನು ನಡೆಸಿದರು.
ಒಡಿಶಾದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಅಲ್ಲಿ ಅತಿಹೆಚ್ಚು ಸದಸ್ಯತ್ವವನ್ನು ಹೊಂದುವ ಗುರಿ ಹೊಂದಿದ್ದಾರೆ. ಈ ನಿಮಿತ್ತ ಕರ್ನಾಟಕದ ಮಾಜಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲುರವರಿಗೆ ಜವಬ್ದಾರಿ ನೀಡಿ ಒಡಿಶಾಗೆ ತೆರಳುವಂತೆ ಸೂಚಿಸಿದ್ದು ಸದ್ಯ ಕಟೀಲುರವರು ಪಕ್ಷದ ಸೂಚನೆಯ ಮೇರೆಗೆ ಒಡಿಶಾದಲ್ಲಿ ಸದಸ್ಯತ್ವ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ.
0 Comments