ತೆಂಕಮಿಜಾರು ಗ್ರಾಮಸಭೆ *ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು ಹೊರಗಿನವರಿಗೆ ಅನುಮತಿಯಿಲ್ಲ

ಜಾಹೀರಾತು/Advertisment
ಜಾಹೀರಾತು/Advertisment

 ತೆಂಕಮಿಜಾರು ಗ್ರಾಮಸಭೆ

 

*ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು ಹೊರಗಿನವರಿಗೆ ಅನುಮತಿಯಿಲ್ಲ

ಮೂಡುಬಿದಿರೆ : ಸಂಜೆ ಕ್ಲಾಸ್‌ ಮುಗಿದ ನಂತರ ಹೊರಗಿನವರು ಶಾಲಾ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು ಅವಕಾಶವಿಲ್ಲ ಆದರೆ ಶಾಲಾ ಆಡಳಿತ ಮಂಡಳಿ ಮತ್ತು ಹೆತ್ತವರ ಒಪ್ಪಿಗೆಯಿದ್ದು ಆಟವಾಡುವಾಗ ಶಿಕ್ಷಕರಿದ್ದು ಶಾಲಾ ಅವಧಿಯೊಳಗೆ ಅವಕಾಶ ನೀಡಬಹುದು ಎಂದು ಶಿಕ್ಷಣ ಇಲಾಖೆಯ ಸಿಆರ್ ಪಿ ದಿನಕರ್ ಅವರು ಗ್ರಾಮಸಭೆಯಲ್ಲಿ ತಿಳಿಸಿದ್ದಾರೆ.

  ಅವರು ಅಶ್ವತ್ಥಪುರ ಸಂತೆಕಟ್ಟೆಯ ವಿವಿದೊದ್ದೇಶ ಮಾರುಕಟ್ಟೆಯಲ್ಲಿ  ನಡೆದ ತೆಂಕ ಮಿಜಾರು ಗ್ರಾ.ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಮಾತನಾಡಿದರು.

  ಗ್ರಾಮಸ್ಥರೋರ್ವರು ಮಾತನಾಡಿ ಶಾಲಾ ಅವಧಿ ಮುಗಿದ ನಂತರ ಮಕ್ಕಳಿಗೆ ಹೊರಗಿನವರು ತರಬೇತಿ ನೀಡುತ್ತಿರುವುದರ ಬಗ್ಗೆ ಸಭೆಯಲ್ಲಿ  ಶಿಕ್ಷಣ ಇಲಾಖೆಯ ಗಮನಕ್ಕೆ ತಂದಾಗ ಅವರು ಉತ್ತರಿಸಿದರು.

  ಗ್ರಾಮಸ್ಥರಾದ ರುಕ್ಕಯ್ಯ ಅವರು ಮಾತನಾಡಿ ಮಕ್ಕಳಲ್ಲಿ  ಕ್ರೀಡಾ ಸಾಮಥ್ಯ ೯ವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರೀಡಾ ತರಬೇತಿಯ ಅವಶ್ಯಕತೆಯಿದೆ ಆದ್ದರಿಂದ ಶಾಲಾಭಿವೃದ್ಧಿ ಸಮಿತಿ ಮತ್ತು ಹೆತ್ತವರ ಒಪ್ಪಿಗೆಯ ಮೇರೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

  ಉಡುಪಿ-ಕಾಸರಗೋಡು ೪೪೦ ಕೆವಿ ವಿದ್ಯುತ್ ಲೈನ್ ಹಾದು ಹೋಗುವಾಗ ರೈತರ ತೋಟ, ಕೃಷಿ ಭೂಮಿಗೆ ನಷ್ಟ ಉಂಟಾಗಿದೆ. ಆದ್ದರಿಂದ  ದಾರಿ-ತೋಟಗಳ ನಡುವೆ ಲೈನ್ ಹಾದುಹೋಗಲು ಪಂಚಾಯತ್ ಅವಕಾಶ ನೀಡುವುದಿಲ್ಲವೆಂದು ಪಂಚಾಯತ್ ನಿರ್ಣಯಕೈಗೊಳ್ಳಬೇಕೆಂದು 

  ಅಲೋನ್ಸ್ ಡಿಸೋಜಾ , ಪಂ. ಸದಸ್ಯ ಬಿ.ಎಲ್. ದಿನೇಶ್ ಮತ್ತಿತರರು ಆಗ್ರಹಿಸಿದಾಗ ಪಂಚಾಯತ್ ವತಿಯಿಂದ ನಿರ್ಣಯಕೈಗೊಳ್ಳಲಾಯಿತು.


 ತೆಂಕ ಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕುಕ್ಕುದಡಿಯಲ್ಲಿನ  ಲೋ ವೋಲ್ಟೇಜ್ ಸಮಸ್ಯೆಯಿಂದಾಗಿ ದೀಪ ಸರಿಯಾಗಿ ಬೆಳಗುವುದಿಲ್ಲ, ನೀರಿನ ಪಂಪ್ ಚಾಲೂ ಮಾಡಲು ನಿದ್ರೆಗೆಡಬೇಕಾಗುತ್ತದೆ. ಸುಮಾರು ೨೫ ಮನೆಗಳು ಈ ಸಮಸ್ಯೆಯಿಂದಾಗಿ ಬಹಳ ತೊಂದರೆ ಅನುಭವಿಸುತ್ತಿವೆ ಎಂದು ಕುಕ್ಕುದಡಿ ನಿವಾಸಿ  ಕೃಷ್ಣ  ಅವರು ಆಗ್ರಹಿಸಿದರು.

ಬಾಲಕೃಷ್ಣ ಶೆಟ್ಟಿಗಾರ್, ವೀರೇಂದ್ರ ಕುಕ್ಕುದಕಟ್ಟೆ ಮೊದಲಾದವರು  ಕೃಷ್ಣ ಅವರ ಜತೆ ದನಿಗೂಡಿಸಿದರು. ಮತ್ತೂ ಒತ್ತಾಯಿಸಿದಾಗ  ಎಡಪದವು ಮೆಸ್ಕಾಂ ಎಸ್‌ಓ ಅವರಿಗೆ ಕರೆ ಮಾಡಿ ಬರುವಂತೆ ತಿಳಿಸಲಾಯಿತು.

ಸುಮಾರು ಒಂದು ತಾಸಿನ ಬಳಿಕ ಅಧಿಕಾರಿ ಆಗಮಿಸಿ, ತಡವಾದುದಕ್ಕೆ ವಿಷಾದಿಸಿ, ಲೋ ವೋಲ್ಟೇಜ್ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.

ಗ್ರಾಮದ ಹೈಸ್ಕೂಲುಗಳಲ್ಲಿ ಈ ಹಿಂದೆ ಉತ್ತಮ ಫಲಿತಾಂಶ ಬರುತ್ತಿದ್ದಿಲ್ಲ, ವಿಶೇಷವಾಗಿ ಅಲ್ಪಸಂಖ್ಯಾತರ ಮಕ್ಕಳು ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳಲ್ಲಿ ಹಿಂದೆ ಬೀಳುತ್ತಲಿದ್ದಾರೆ. ಜಮೀಯತುಲ್‌ಫಲಾಹ್ ಸಂಸ್ಥೆಯ ಮೂಲಕ ಈ ವಿಷಯಗಳಲ್ಲಿ  ಪರಿಣಾಮಕಾರಿ ತರಬೇತಿ ನೀಡತೊಡಗಿದ ನಂತರ ಸುಧಾರಣೆ ಕಂಡಿದೆ, ಆದರೆ ಇಲಾಖೆ ಏನು ಕ್ರಮವರಿಸಿದೆ ಎಂದು ಸಲೀಂ ಕೇಳಿದಾಗ ಇಲಾಖೆಯ ವತಿಯಿಂದ ಕಲಿಕೆಯಲ್ಲಿ  ಹಿಂದುಳಿದಿರುವವರಿಗೆ ಸರ್ವಶಿಕ್ಷಣ ಅಭಿಯಾನದ   ಮೂಲಕ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಕಾರಿ ಕಚೇರಿಯ ಪರವಾಗಿ ಉಪಸ್ಥಿತರಿದ್ದ  ಸಿಆರ್‌ಪಿ ದಿನಕರ ತಿಳಿಸಿದರು.


ವರುಷಕ್ಕೆ ಒಂದೇ ಗ್ರಾಮಸಭೆ

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಗ್ರಾಮಸಭೆ ಆಗಿದೆ. ನಿಜಕ್ಕಾದರೆ ವರ್ಷಕ್ಕೆ ಎರಡು ಸಲ ಗ್ರಾಮಸಭೆ ಆಗಬೇಕಿತ್ತು .ಏಕೆ ಆಗಿಲ್ಲ? ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ ಪಿಡಿಓ ರೋಹಿಣಿ ಅವರು ಚುನಾವಣೆಯ ಕಾರಣದಿಂದಾಗಿ  ಗ್ರಾಮಸಭೆ ನಡೆಸಲಾಗಿರಲಿಲ್ಲ ಎಂದರು.


ಪಂಚಾಯತ್ ಅಧ್ಯಕ್ಷೆ ಶಾಲಿನಿ ಅಧ್ಯಕ್ಷತೆ ವಹಿಸಿದ್ದರು.


ಸಮ್ಮಾನ:

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನೀರ್ಕೆರೆ ಶಾಲಾ ಮುಖ್ಯ ಶಿಕ್ಷಕಿ ಯಮುನಾ ಕೆ. ಅವರನ್ನು ಅಭಿನಂದಿಸಿ ಸಮ್ಮಾನಿಸಲಾಯಿತು.


 ತೋಟಗಾರಿಕಾ ಇಲಾಖೆಯ ಹಿ. ಸ. ನಿರ್ದೇಶಕ ಕೆ. ಪ್ರವೀಣ ನೋಡಲ್ ಅಧಕಾರಿಯಾಗಿದ್ದರು.  ಪಂ.ಉಪಾಧ್ಯ ಕರುಣಾಕರ ಶೆಟ್ಟಿ, ಸದಸ್ಯರು, ವಿಎ ಸ್ವಾತಿ ಕೋಟ್ಯಾನ್, ಸಿಎಚ್‌ಓ ದಿವ್ಯಪ್ರಭಾ  ಡಿಸೋಜ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ  ಕಾತ್ಯಾಯಿನಿ,  ಎಂ.,ಪಶುಸಂಗೋಪನ  ಇಲಾಖೆಯ ರಮೇಶ್, ಕಲ್ಲಮುಂಡ್ಕೂರು ಪಿಎಚ್‌ಸಿಯ ಡಾ. ತ್ರಿವೇಣಿ ಆಚಾರ್ಯ, ಕೃಷಿ ಇಲಾಖೆಯ ಜೆ.ಎಸ್. ನಿಂಗನಗೌಡರ, ಮೆಸ್ಕಾಂ ಅಧಿಕಾರಿ ಬಾಲಕೃಷ್ಣ. ಮೋಹನ ರಾಜ್ ನೀರ್ಕೆರೆ, ಕೆನರಾ ಬ್ಯಾಂಕ್ ಮೆನೇಜರ್ ಮೀನಾ ನಾಯಕ್ ಅವರು ಇಲಾಖಾ ಮಾಹಿತಿ ನೀಡಿದರು.

Post a Comment

0 Comments