ಕೋಳಿ ತ್ಯಾಜ್ಯ ಸುರಿದವರಿಗೆ ದಂಡ ವಿಧಿಸಿದ ಬೆಳುವಾಯಿ ಪಿಡಿಒ ಭೀಮ ನಾಯಕ್

ಜಾಹೀರಾತು/Advertisment
ಜಾಹೀರಾತು/Advertisment

 ಕೋಳಿ ತ್ಯಾಜ್ಯ ಸುರಿದವರಿಗೆ ದಂಡ ವಿಧಿಸಿದ ಬೆಳುವಾಯಿ ಪಿಡಿಒ ಭೀಮ ನಾಯಕ್

ಮೂಡುಬಿದಿರೆ: ಕೋಳಿಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಸುರಿಯುತ್ತಿದ್ದ ವ್ಯಕ್ತಿಗಳನ್ನು ಹಿಡಿದು ರೂ 5000 ದಂಡ ವಿಧಿಸಿದ ಬೆಳುವಾಯಿ ಗ್ರಾಮ ಪಂಚಾಯತ್.

  ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಹಮ್ಮದ್ ಶರೀಫ್ ಎಂಬವರು ತಮ್ಮ ಸಹಚರರೊಂದಿಗೆ ಕೋಳಿ ತ್ಯಾಜ್ಯವನ್ನು ಕಲ್ಲೋಳಿ ಸೇತುವೆಗೆ ಸುರಿಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ್ ಬಿ, ಅಧ್ಯಕ್ಷ ಸುರೇಶ್ ಪೂಜಾರಿ ಮತ್ತು ಸಿಬಂಧಿ ರಮೇಶ್  ಅವರು ಸ್ಥಳಕ್ಕೆ ತೆರಳಿ ಇನ್ನು ಮುಂದೆ ಈ ಸ್ಥಳದಲ್ಲಿ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಲ್ಲದೆ, ಮುಂದೆ ತ್ಯಾಜ್ಯ ಸುರಿದರೆ ಕೋಳಿ ಅಂಗಡಿಯ ಪರವಾನಿಗೆಯನ್ನು ರದ್ದು ಪಡಿಸಲಾಗುವುದೆಂದು  ಅಫಿಡಾವಿಟ್ ಮಾಡಿಕೊಳ್ಳಲಾಯಿತು.

  ಪುರಸಭೆ ಹಾಗೂ ಪಂಚಾಯತ್ ವ್ಯಾಪ್ತಿಗಳಲ್ಲಿ ಕಸ, ತ್ಯಾಜ್ಯಗಳನ್ನು ರಸ್ತೆಯ ಬದಿಗಳಲ್ಲಿ ಎಸೆದು ಹೋಗುವವರಿಗೆ ಇಂತಹ ಕ್ರಮವನ್ನು ಅಧಿಕಾರಿಗಳು ಕೈಗೊಂಡರೆ ಮುಂದೆ ಇಂತಹ ಪ್ರಕರಣಗಳು ನಡೆಯುವುದು ಕಡಿಮೆಯಾಗಬಹುದು.

Post a Comment

0 Comments