ಅಳಿಯೂರು ಪಿ.ಯು.ಕಾಲೇಜು: ಶೇ 100 ಫಲಿತಾಂಶ, ಪ್ರಾಂಶುಪಾಲೆಗೆ ಅಭಿನಂದನೆ
ಮೂಡುಬಿದಿರೆ: ಸರಕಾರಿ ಪದವಿ ಪೂರ್ವ ಕಾಲೇಜು ಅಳಿಯೂರು ಇಲ್ಲಿ
ಪ್ರಥಮ ವರ್ಷದಲ್ಲೆ100% ಫಲಿತಾಂಶ ನೀಡಿದ ಪ್ರಾಂಶುಪಾಲೆ ಮತ್ತು ವಿಧ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಶನಿವಾರ ನಡೆಯಿತು.
ಅಳಿಯೂರು ಪಿ.ಯು.ಕಾಲೇಜಿನಲ್ಲಿ ಮೊದಲ ವರ್ಷವೇ ನೂರು ಶೇಕಡಾ ಫಲಿತಾಂಶ ಬರುವಲ್ಲಿ ಕಾರಣೀಕರ್ತರಾಗಿರುವ ಮತ್ತು ಈ ಬಾರಿಯ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದಿರುವ ಗಣಿತ ಶಿಕ್ಷಕಿ ವಿದ್ಯಾ ಸಂದೀಪ್ ನಾಯಕ್ ಗೆ ಅಭಿನಂದಿಸಲಾಯಿತು.
ಕಾಲೇಜು ಅಭಿವ್ರಧ್ಧಿ ಸಮಿತಿ ಅಧ್ಯಕ್ಷ ಗಣೇಶ್ ಬಿ ಅಳಿಯೂರು ಅಧ್ಯಕ್ಷತೆ ವಹಿಸಿದ್ದರು.
ಯುವ ನ್ಯಾಯವಾದಿ ಮಯೂರ ಕೀರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶಿಕ್ಷಕರ ಜೊತೆ ನಿಂತು ನಾವು ಸಹಕಾರ ನೀಡಿದರೆ ದಾಖಲೆ ಫಲಿತಾಂಶ ಪಡೆಯಬಹುದು. ನ್ಯಾಯವಾದಿಗಳಿಗೆ ತೊಂದರೆಯಾದರೆ ಬಾರ್ ಕೌನ್ಸಿಲ್ ಇದೆ ಆದರೆ ಶಿಕ್ಷಕರ ಮೇಲೆ ದೌರ್ಜನ್ಯ ಆದರೆ ಪ್ರಶ್ನಿಸುವರಿಲ್ಲ ಆದ್ದರಿಂದ ಮಕ್ಕಳು ನೀತಿವಂತರಾಗಿ ಎಂದು ಶುಭ ಹಾರೈಸಿದರು.
ದಾನಿ ರಮಾನಂದ ಸಾಲ್ಯಾನ್,
ದಾನಿ ರಮಾನಂದ ಸಾಲ್ಯಾನ್ ದಂಪತಿ ಸಮೇತ ಗೌರವಿಸಲಾಯಿತು.
ಪ್ರೌಡಶಾಲಾ ಅಧ್ಯಕ್ಷರು ಪ್ರದೀಪ್ ಕುಮಾರ್, ಪ್ರಾಥಮಿಕ ಶಾಲಾ ಅಧ್ಯಕ್ಷರು ರವೀಂದ್ರ ಪೂಜಾರಿ, ಉಪಾಧ್ಯಕ್ಷ ಲೋಕೇಶ್, ಮ ಪ್ರೌಢಶಾಲೆ ಹಾಗೂ ಫ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಪ್ರವೀಣ್ ಭಟ್, ಲಕ್ಮ್ಯಣ್ ಸುವರ್ಣ, ಶ್ರೀಧರ ಬಂಗೇರ ಮುನಿರಾಜ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಅರುಣಾ ವಂದಿಸಿದರು.
0 Comments