ಶಿಕ್ಷಕ ಸುಪ್ತ ಶಕ್ತಿಯ ಪ್ರಕಾಶಕ-ಪ್ರತಾಪ್ ಸಿಂಹ ನಾಯಕ್
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ ದಿನಾಚರಣೆ
ಮೂಡುಬಿದಿರೆ : ಕನಸು ಕಾಣುವ ಹದಿಹರೆಯದಲ್ಲಿ ಗುರುವಿನ ಪಥರ‍್ಶನದಿಂದ ಭವ್ಯ ಭವಿಷ್ಯವನ್ನು ಕಟ್ಟಿಕೊಳ್ಳಬಹುದು. ವಿದ್ಯಾರ್ಥಿಯ ಭವಿಷ್ಯದ ಕಾಳಜಿಯಿಂದ
ಸುಪ್ತವಾಗಿರುವ ಶಕ್ತಿಯನ್ನು ಬೆಳಕಿಗೆ ತರುವುದು ಶಿಕ್ಷಕನ ಧರ್ಮ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಯೌವನ
ಬರುವುದು ಅಂದ ಚಂದಕ್ಕಲ್ಲ ಬದಲಾಗಿ ಅಸಾಧ್ಯವಾಗಿದ್ದನ್ನು ಸಾಧಿಸಲು. ಮನಸ್ಸಿನ ಕ್ಷಮತೆ ಬಲು ದೊಡ್ಡದು. ನನ್ನಿಂದ ಸಾಧ್ಯ
ಎಂಬ ಸಕಾರಾತ್ಮಕ ಚಿಂತನೆ ಅನೂಹ್ಯವಾದ ಕಾರ‍್ಯವನ್ನು ಮಾಡಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ ನಮ್ಮ ಬದುಕಿನ
ಶಿಲ್ಪಿಗಳಾದ ಶಿಕ್ಷಕರು, ಸಮಾಜದ ಗುರು ಶಕ್ತಿಯಾಗಿದ್ದಾರೆ. ನಿಶ್ಚಿತ
ಗುರಿಯೆಡೆಗೆ ಸಾಗುವಲ್ಲಿ ಗುರುವಿನ ಪಾತ್ರ ಮಹತ್ತರವಾದದ್ದು. ಗುರುವಿನಿಂದ ಪಡೆಯುವ ಜ್ಞಾನದ ಜೊತೆಗೆ ಉತ್ತಮ
ಮನೋಭಾವವನ್ನು ಹೊಂದಿ ಕೌಶಲವನ್ನು ಬೆಳೆಸಿಕೊಂಡರೆ ಅವಕಾಶದ ಹೆಬ್ಬಾಗಿಲು ತೆರೆಯುತ್ತದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಎಸ್ ಡಿಎಂ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರು ಪ್ರೊ.ವಿಶ್ವನಾಥ ಪಿ, ಗಣಿತಶಾಸ್ತ್ರ ವಿಭಾಗ
ಮುಖ್ಯಸ್ಥರಾದ ಪ್ರೊ ಬಿ ನಾಗೇಶ್ ನಾಯಕ್, ಎಸ್ ಡಿ ಎಂ ಕಾಲೇಜು, ಕೆ ವಸಂತರಾಜ್ ಜೈನ್, ಪರೀಕ್ಷಾಂಗ ವಿಭಾಗದ ಕುಲಸಚಿವರು ಪ್ರೊ. ಶಾಂತಿಪ್ರಕಾಶ್
ನಿವೃತ್ತ ಶಿಕ್ಷಕಿ ಶಾಲಿನಿ ತಾಕೊಡೆ ಇವರಿಗೆ ಗುರುವಂದನೆ
ಸಲ್ಲಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಗುರುವಂದನಾ ಭಾಷಣ ಮಾಡಿದರು.
ಕಳೆದ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ಅಣಿಗೊಳಿಸಿ ಉತ್ತಮ ಫಲಿತಾಂಶಕ್ಕೆ
ಕಾರಣರಾದ ವಿವಿಧ ವಿಭಾಗಗಳ ಅಧ್ಯಾಪಕರನ್ನು ಆಡಳಿತ ಮಂಡಳಿಯು ಗೌರವಧನದೊಂದಿಗೆ ಪ್ರೋತ್ಸಾಹಿಸಿತು.
ಸಂಸ್ಥೆಯ
ಆಡಳಿತ ನಿರ್ದೇಶಕ ಡಾ. ಬಿ.ಪಿ ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಪುಷ್ಪರಾಜ್, ಎಕ್ಸಲೆಂಟ್ ಸಿಬಿಎಸ್ಸಿ
ಶಾಲೆಯ ಪ್ರಾಂಶುಪಾಲ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಹರೀಶ್ ಮರವಂತೆ ಸಾಧಕ ಶಿಕ್ಷಕರನ್ನು
ಪರಿಚಯಿಸಿದರು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್
ವಂದಿಸಿದರು. ಅಧ್ಯಾಪಕರಾದ ಯಶಸ್ವಿನೀ, ವೆನೆಸ್ಸಾ ನೊರನ್ಹಾ ಕಾರ್ಯಕ್ರಮ ನಿರೂಪಿಸಿದರು.
0 Comments