ರುದ್ರಾಂಶ ಸೇವಾ ಫೌಂಡೇಶನಿಂದ ನಡ್ಯೋಡಿ ಶಾಲೆಗೆ ಕಲಿಕಾ ಸಾಮಾಗ್ರಿ ವಿತರಣೆ
ಮೂಡುಬಿದಿರೆ: ನಡ್ಯೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಪಾಡಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ರುದ್ರಾಂಶ ಸೇವಾ ಫೌಂಡೇಶನ್ ಕಲ್ಲಬೆಟ್ಟು ವತಿಯಿಂದ ಪ್ರಾಥಮಿಕ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತ ಕಲಿಕಾ ಸಾಮಾಗ್ರಿ ಹಾಗೂ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ರುದ್ರಾಂಶ ಸೇವಾ ಫೌಂಡೇಶನ್ನಿನ ಸ್ಥಾಪಕರಾದ ಅಜಯ್ ಶೆಟ್ಟಿ, ರಶ್ಮಿತಾ ಅಜಯ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸವಿತಾ ಸತೀಶ್, ಸಲಹಾ ಸಮಿತಿ ಸ್ಥಾಪಕ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ, ನಡ್ಯೋಡಿ ದೈವಸಸ್ಥಾನದ ಅಧ್ಯಕ್ಷ ಪ್ರದೀಪ್ ರೈ, ಯುವಕ ಮಂಡಲ ಅಧ್ಯಕ್ಷ ಸತೀಶ್ ಪೂಜಾರಿ, ಮಹಿಳಾ ಮಂಡಲ ಅಧ್ಯಕ್ಷೆ ಗೀತಾ ಪಿ ಶೆಟ್ಟಿ, ಭಾರತೀಯ ಕಿಸಾನ್ ಸಂಘ ಮಾರ್ಪಾಡಿ ಘಟಕ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ರೈತ ಸಂಘದ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಮುಖ್ಯ ಶಿಕ್ಷಕಿ ಉಷಲತಾ, ಶಿಕ್ಷಕಿ ಜೆನೆಟ್ ಲೋಬೊ, ಗೌರವ ಶಿಕ್ಷಕಿ ಮಮತ ರಾಜೇಶ್ ಉಪಸ್ಥಿತರಿದ್ದರು.
0 Comments