ಎಸ್ ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ : ಸ್ವಚ್ಛತಾ ಹೀ ಸೇವಾ

ಜಾಹೀರಾತು/Advertisment
ಜಾಹೀರಾತು/Advertisment

 ಎಸ್ ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ : ಸ್ವಚ್ಛತಾ ಹೀ ಸೇವಾ 

 ಮೂಡುಬಿದಿರೆ: ಭಾರತ ಸರಕಾರದ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡುಬಿದಿರೆಯ ಎನ್ಎಸ್ಎಸ್ ನ  ವಿದ್ಯಾರ್ಥಿಗಳ ತಂಡ ಮೂಡುಬಿದಿರೆ ಪೊಲೀಸ್ ಠಾಣಾ ವಠಾರ ಹಾಗೂ ಸರಕಾರಿ ಆಸ್ಪತ್ರೆ ವಠಾರದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.

 ಪೊಲೀಸ್ ಠಾಣಾ ವಠಾರದ ಸ್ವಚ್ಛತೆಯ ಸಂದರ್ಭ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. 


 ಸರಕಾರಿ ಆಸ್ಪತ್ರೆ ಆವರಣ ಸ್ವಚ್ಛತೆಯಲ್ಲಿ ಆರೋಗ್ಯ ಅಧಿಕಾರಿ ಡಾ.ಅಕ್ಷತಾ ನಾಯಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಡಾ.ಅಕ್ಷತಾ ನಾಯಕ್ ವಿದ್ಯಾರ್ಥಿಗಳಿಗೆ ವಿಶ್ವ ರೇಬಿಸ್  ದಿನಾಚರಣೆ ಕುರಿತಾದ  ಮಾಹಿತಿಯನ್ನು ನೀಡಿದರು. 


 ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ರಾಮ್ ಪ್ರಸಾದ್ ಎಂ ಹಾಗೂ ಗೋಪಾಲ ಕೃಷ್ಣ ಕೆ ಎಸ್, ಹಿರಿಯ ವಿದ್ಯಾರ್ಥಿ ಪ್ರಖ್ಯಾತ್, ಘಟಕ ನಾಯಕರು, ಸ್ವಯಂಸೇವಕರುಗಳು ಉಪಸ್ಥಿತರಿದ್ದರು.

Post a Comment

0 Comments