ಮೂಡುಬಿದಿರೆಯಲ್ಲಿ ಐ.ಸಿ.ವೈ.ಎಂನಿಂದ ಡ್ರಗ್ ಜಾಗೃತಿ ವಾಕಥಾನ್

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ಮೂಡುಬಿದಿರೆಯಲ್ಲಿ ಐ.ಸಿ.ವೈ.ಎಂನಿಂದ ಡ್ರಗ್ ಜಾಗೃತಿ ವಾಕಥಾನ್

ಮೂಡುಬಿದಿರೆ: ಐ.ಸಿ.ವೈ.ಎಂ. ಮೂಡುಬಿದಿರೆ ಘಟಕವು, ಐ.ಸಿ.ವೈ.ಎಂ. ಮೂಡುಬಿದಿರೆ ವಲಯ ಮತ್ತು ಐ.ಸಿ.ವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ಸಹಯೋಗದೊಂದಿಗೆ ಮಾದಕ ದ್ರವ್ಯ ಸೇವನೆಯ ಬಗ್ಗೆ ಜಾಗೃತಿ ಮೂಡಿಸಲು ವಾಕಥಾನ್ ಕಾರ್ಯಕ್ರಮ ಭಾನುವಾರ ನಡೆಯಿತು.


   ವಿದ್ಯಾಗಿರಿ ಬಸ್ ನಿಲ್ದಾಣದಿಂದ ಮಧ್ಯಾಹ್ನ 3:00 ಗಂಟೆಗೆ ಪ್ರಾರಂಭವಾಯಿತು. ಐ.ಸಿ.ವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ವಂದನೀಯ ಗುರು ಅಶ್ವಿನ್ ಲೋಹಿತ್ ಕಾರ್ಡೋಜಾ ಮತ್ತು ಐ.ಸಿ.ವೈ.ಎಂ. ಮೂಡುಬಿದಿರೆ ಘಟಕದ ನಿರ್ದೇಶಕರಾದ ಅತೀ ವಂದನೀಯ ಗುರು ಓನಿಲ್ ಡಿಸೋಜಾ ಅವರು ಪಥಸಂಚಲನದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. 

ಐ.ಸಿ.ವೈ.ಎಂ. ಮಂಗಳೂರು ಕೇಂದ್ರಿಯ ಸಮಿತಿಯ ಅಧ್ಯಕ್ಷರಾದ ಶ್ರೀ ವಿನ್‌ಸ್ಟನ್ ಸಿಕ್ವೇರಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು . ಮೆರವಣಿಗೆಯು ಪ್ರಧಾನ ಬ್ಯಾನರ್‌ನೊಂದಿಗೆ ಮತ್ತು ಐ.ಸಿ.ವೈ.ಎಂ. ಮೂಡುಬಿದಿರೆ ಘಟಕ, ವಲಯ ಮತ್ತು ಧರ್ಮಪ್ರಾಂತ್ಯದ ಧ್ವಜದೊಂದಿಗೆ ನಡೆದಿತು. ಡ್ರಗ್ ಜಾಗೃತಿಯ ಕುರಿತ ಶಕ್ತಿಯುತ ಸಂದೇಶಗಳನ್ನು ಹೊಂದಿರುವ ಫಲಕಗಳನ್ನು ಹಿಡಿದಿದ್ದ ಪಾಲ್ಗೊಳ್ಳುವವರೊಂದಿಗೆ, ನೀರು ಮತ್ತು ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ವಾಹನಗಳ ವ್ಯವಸ್ಥೆಯೂ ಮಾಡಲಾಗಿತ್ತು.



ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ, ಐ.ಸಿ.ವೈ.ಎಂ. ಮೂಡುಬಿದಿರೆ ಘಟಕವು ಮಾದಕ ದ್ರವ್ಯ ಬಳಕೆಯ ಅಪಾಯಗಳನ್ನು ಸಾರುವ ಬೀದಿ ನಾಟಕವನ್ನು ಪ್ರದರ್ಶಿಸಿದರು.

 ಸಂಪನ್ಮೂಲ ವ್ಯಕ್ತಿ ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ  ಸಂದೇಶ್ ಪಿ.ಜಿ. ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28% ಯುವಕರು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದಾರೆ ಎಂಬ ಅಂಕಿ ಅಂಶವನ್ನು ಹಂಚಿಕೊಂಡರು ಮತ್ತು ಈ ಸಮಸ್ಯೆಯನ್ನು ನಿವಾರಿಸಲು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಈ ವಾಕಥಾನ್‌ನಲ್ಲಿ ಐ.ಸಿ.ವೈ.ಎಂ. ಕೇಂದ್ರಿಯ ಸಮಿತಿ ಸದಸ್ಯರು ಹಾಗೂ ಹಲವಾರು ಐ.ಸಿ.ವೈ.ಎಂ. ಘಟಕಗಳು ಸೇರಿದಂತೆ  ಸುಮಾರು 200 ಯುವಕರು ಭಾಗವಹಿಸಿದ್ದರು.

ಸಮಾರೋಪ ಸಮಾರಂಭವನ್ನು ಕೊರ್ಪುಸ್ ಕ್ರಿಸ್ಟಿ ಚರ್ಚ್‌ನಲ್ಲಿ ಏರ್ಪಡಿಸಲಾಯಿತು. ಐ.ಸಿ.ವೈ.ಎಂ. ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ  ವಿನ್‌ಸ್ಟನ್ ಸಿಕ್ವೇರಾ, ಐ.ಸಿ.ವೈ.ಎಂ. ಮೂಡುಬಿದಿರೆ ಘಟಕದ ಅಧ್ಯಕ್ಷ ವಿಯಾನ್ ಡಿಸೋಜ, ಐ.ಸಿ.ವೈ.ಎಂ. ಮೂಡುಬಿದಿರೆ ವಲಯದ ಅಧ್ಯಕ್ಷ ಜೇವಿನ್ ಡಿಸೋಜ,ಐ.ಸಿ.ವೈ.ಎಂ ಮೂಡುಬಿದಿರೆ ಘಟಕದ ಸಂಚಾಲಕರಾದ  ಕೆವಿನ್ ಡಿಸೋಜ ಮತ್ತು  ರಾಯಸ್ಟನ್ ಪಿಂಟೋ, ಗೋಲ್ಡನ್ ಜ್ಯುಬಿಲಿ ಸಂಚಾಲಕರಾದ ವಿನ್ಸೆoಟ್ ಮಸ್ಕರೇನಸ್ ಸೇರಿದಂತೆ  ಗಣ್ಯರು ಉಪಸ್ಥಿತರಿದ್ದರು. 


 ವಿಯಾನ್ ಡಿಸೋಜಾ ಅವರು ಸಭೆಯನ್ನು ಸ್ವಾಗತಿಸಿದರು, ನಂತರ ಧರ್ಮಗುರು ಅಶ್ವಿನ್ ಲೋಹಿತ್ ಕಾರ್ಡೋಜಾ ಮತ್ತು ಧರ್ಮ ಗುರು ಓನಿಲ್ ಡಿಸೋಜಾ ಅವರಿಂದ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

  ಅಶ್ಲಿನ್ ಡಿಸೋಜ ಹಾಗೂ ನಿಶಲ್ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು. ಜೆವಿನ್ ಡಿಸೋಜಾ  ವಂದಿಸಿದರು.

Post a Comment

0 Comments

Advertisement