ರಾಮಭಕ್ತಿಯ ಜೊತೆಗೆ ಮಥುರಾ, ಜ್ಞಾನವ್ಯಾಪಿಯ ಮೇಲೂ ಭಕ್ತಿ ತೋರಲಿ-ಹರಿಪ್ರಸಾದ್ ಹೇಳಿಕೆಗೆ ಟಕ್ಕರ್ ಕೊಟ್ಟ ಕೋಟ
ಅಯೋಧ್ಯೆಯ ರಾಮ ಮಂದಿರದ ಕಾಣಿಕೆ ಹುಂಡಿಯ ಹಣ ದುರುಪಯೋಗದ ಕುರಿತಂತೆ ಕೆ.ಪಿ.ಸಿ.ಸಿ. ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಗೆ ಉಡುಪಿಯಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ದಿಢೀರನೆ ಕಾಂಗ್ರೆಸಿಗರಿಗೆ ರಾಮನ ಬಗ್ಗೆ ಭಕ್ತಿ, ಪ್ರೀತಿ ಉಕ್ಕಿದ್ದು, ಅವರ ಮನ ಪರಿವರ್ತನೆಯಾಗಿದೆ. ಕಾಂಗ್ರೆಸಿಗರು ಈಗಲಾದರೂ ರಾಮನ ಬಗ್ಗೆ ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಸಂಸದರು ತಿಳಿಸಿದ್ದಾರೆ.
ರಾಮ ಮಂದಿರದ ಕಾಣಿಕೆ ಹುಂಡಿಯ ಹಣ ದುರುಪಯೋಗ ವಿಚಾರವನ್ನು ಎಲ್ಲಾ ರಾಮಭಕ್ತರು ಖಂಡಿಸುತ್ತಾರೆ. ದುರುಪಯೋಗ ಮಾಡಿಕೊಂಡವರ ವಿರುದ್ಧ ತನಿಖೆಗೆ ಎಸ್ಐಟಿ ರಚಿಸಲಾಗಿದೆ.
ದುರುಪಯೋಗವಾದ ಹಣ ಬಡ್ಡಿ ಸಮೇತ ವಸೂಲು ಮಾಡುವುದರ ಜತೆಗೆ ಶ್ರೀ ರಾಮನ ಹುಂಡಿಯ ಹಣ ದುರುಪಯೋಗ ಮಾಡಿದವರನ್ನು ಜೈಲಿಗೆ ಅಟ್ಟುವ ಕೆಲಸವು ಆಗುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ರಾಮ ಮೆಚ್ಚುವ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸ ಎಲ್ಲ ರಾಮಭಕ್ತರಿಗೆ ಇದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇದೇ ವೇಳೆ ಮಥುರಾ ಹಾಗೂ ಕಾಶಿ (ಜ್ಞಾನವ್ಯಾಪಿ) ದಾಸ್ಯದ ಕುರುಹಿನಲ್ಲಿದೆ. ಅದನ್ನೂ ಮತ್ತೆ ಹಿಂದೂಗಳಿಗೆ ಸೇರುವಲ್ಲಿ ಕಾಂಗ್ರೆಸ್ ನಮ್ಮ ಜೊತೆಗೂಡಲಿ ಎಂದು ಅವರು ಹೇಳಿದರು.



0 Comments