ಮಂಡ್ಯದಲ್ಲಿ ಗಣೇಶನ ವಿಸರ್ಜನೆ ಸಂದರ್ಭ ಅನ್ಯಮತೀಯರ ದಾಳಿ: ಮೂಡುಬಿದಿರೆಯಲ್ಲಿ ಗಣೇಶೋತ್ಸವ ಸಮಿತಿಗಳಿಂದ ಪ್ರತಿಭಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಮಂಡ್ಯದಲ್ಲಿ ಗಣೇಶನ ವಿಸರ್ಜನೆ ಸಂದರ್ಭ ಅನ್ಯಮತೀಯರ ದಾಳಿ: ಮೂಡುಬಿದಿರೆಯಲ್ಲಿ ಗಣೇಶೋತ್ಸವ ಸಮಿತಿಗಳಿಂದ ಪ್ರತಿಭಟನೆ

ಮೂಡುಬಿದಿರೆ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭ ನಡೆದ ಅನ್ಯಮತೀಯರ ದಾಳಿ ವಿರೋಧಿಸಿ ಮೂಡುಬಿದಿರೆ ತಾಲೂಕು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ ನೇತೃತ್ವದಲ್ಲಿ ಮೂಡುಬಿದಿರೆಯ ಬಸ್ ನಿಲ್ದಾಣದಲ್ಲಿ  ಶುಕ್ರವಾರ ಸಂಜೆ ಪ್ರತಿಭಟನೆ ನಡೆಯಿತು. 

 ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ನರಸಿಂಹ ಶೆಟ್ಟಿ ಮಾಣಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಸನಾತನ ದೇಶದಲ್ಲಿ ಗಣೇಶ ಪೂಜೆಗೂ ವಿಘ್ನ ದೊರೆತಿರುವುದು ಆತಂಕಕಾರಿ. ಶಾಂತಿ ಪ್ರಿಯ ಹಿಂದೂ ಸಮಾಜದ ಮೇಲೆ ಅನ್ಯಮತೀಯರ ದಾಳಿಯನ್ನು ವಿರೋಧಿಸುವ ನಿಟ್ಟಿನಲ್ಲಿ ಒಬ್ಬ ಮತಾಂಧ ಕಲ್ಲು ಎಸೆದರೆ ತಿರುಗಿ 10 ಕಲ್ಲುಗಳನ್ನು ಎಸೆಯುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದರು. 

 ಇತಿಹಾಸದಲ್ಲಿ ನಾವು ಸತ್ಯಯುಗ, ತ್ರೇತಾಯುಗ ದ್ವಾಪರ ಯುಗವನ್ನು ನಾವು ಕಂಡಿದ್ದೇವೆ ಆ ಎಲ್ಲಾ ಯುಗದಲ್ಲಿಯೂ ದೇಶ ವಿರೋಧಿ ಚಟುವಟಿಕೆ ನಡೆದಾಗ ಕ್ರಾಂತಿಕಾರಕ ಹೋರಾಟದಿಂದಲೇ ಜಯ ಪಡೆದುಕೊಂಡಿದ್ದೇವೆ. ಮುಂದೆ ಇಂತಹ ಘಟನೆಗಳು ಮುಂದುವರೆದರೆ ಕ್ರಾಂತಿಗೆ ಮುನ್ನುಡಿಯಾದೀತು ಎಂದು  ಎಚ್ಚರಿಸಿದ ಅವರು

  ಮತಕ್ಕೋಸ್ಕರ ಕಾಂಗ್ರೆಸ್ ತುಷ್ಟಿ ಕರಣ ವಿರೋಧಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮಂಡಲಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ ಪೊಲೀಸರು ಕಾನೂನು ಬದ್ದವಾಗಿ ಕೆಲಸ ಮಾಡಿದ್ರೆ ಹಿಂದೂ ಸಮಾಜ ಗೌರವ ನೀಡುತ್ತದೆ. ಯಾರದ್ದೇ ಹೆದರಿಕೆ ಇಲ್ಲದೆ ಅಂಗಡಿಗಳನ್ನು ಲೂಟಿ ಮಾಡುವ, ನಾಶ ಮಾಡುವ ನಾಗಮಂಗಲದಂತಹ ಪ್ರಕರಣ ನಡೆಯಲು ಅಷ್ಟು ಧೈರ್ಯ ಬರಲು ಕಾರಣ ಯಾರು ಎಂಬುದನ್ನು ಯೋಚಿಸಬೇಕಾಗಿದೆ ಎಂದು ಹೇಳಿದರು. 


ಹಿಂ.ಜಾ.ವೇ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ, ಮೂಡುಬಿದಿರೆ ತಾಲೂಕು ಸಂಯೋಜಕ ಹರೀಶ್ಚಂದ್ರ ಕೆ. ಸಿ., ಸಹ ಸಂಯೋಜಕ ಶರತ್ ಮಿಜಾರು, ಬಜರಂಗದಳ ತಾಲೂಕು ಸಂಯೋಜಕ ಅಭಿಲಾಷ್, ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ನ್ಯಾಯವಾದಿ ಬಾಹುಬಲಿ ಪ್ರಸಾದ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಪ್ರಮುಖರಾದ ಸುಚೇತನ್ ಜೈನ್, ಸೋಮನಾಥ್ ಕೋಟ್ಯಾನ್, ಈಶ್ವರ್ ಕಟೀಲ್, ಕಸ್ತೂರಿ ಪಂಜ, ಶಾಂತಾರಾಮ ಕುಡ್ವ, ಶ್ಯಾಮ ಹೆಗ್ಡೆ ಬೆಳುವಾಯಿ, ಅಶೋಕ್ ಕುಮಾರ್ ಶೆಟ್ಟಿ ಬೆಲೋಟ್ಟು, ಅಶ್ವತ್ಥ್ ಪಣಪಿಲ, ಕುಮಾರ್, ಪ್ರದೀಪ್ ಕುಮಾರ್ ವಾಲ್ಪಾಡಿ, ಭರತ್ ಶೆಟ್ಟಿ ಬೆಳುವಾಯಿ, ವಿವಿಧ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Post a Comment

0 Comments