ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ


ಮೂಡುಬಿದಿರೆ: ಆತ್ಮಹತ್ಯೆ ಎಂಬುದು ಒಂದು ಸೂಕ್ಷ್ಮ ವಿಚಾರ. ಅತೀವ ಮಾನಸಿಕ ಒತ್ತಡ ಅಥವಾ ಸಹಿಸಲಾಗದ ವೇದನೆ ಉಂಟಾದಾಗ ಆತ್ಮಹತ್ಯೆಯಂತಹ ಆಘಾತಕಾರಿ ವಿಚಾರವನ್ನು ಮನಸ್ಸು ಪ್ರಚೋದಿಸುವುದು. ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವು ವ್ಯಕ್ತಿಯೊಬ್ಬನಿಗೆ ಬಹುಮುಖ್ಯ. ದೈನಂದಿನ ಜೀವನದಲ್ಲಿ ನಿರಾಸಕ್ತಿ, ಬದುಕಿನ ಹತಾಶೆ, ಖಿನ್ನತೆಗಳಿಗೆ ಒಳಗಾಗದಂತೆ ಬೇರೆ ಬೇರೆ ಚಟುವಟಿಕೆ, ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಮನಸ್ಸು ಸದಾ ಲವಲವಿಕೆಯಿಂದ ಇದ್ದರೆ ಯಾವುದೇ ವಿನಾಶಕಾರಿ ಯೋಚನೆ ಹತ್ತಿರ ಎಂದು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಹೇಳಿದರು.


 ಶ್ರೀ ಮಹಾವೀರ ಕಾಲೇಜಿನ ಐ.ಕ್ಯೂ.ಎ.ಸಿ., ಎನ್.ಸಿ.ಸಿ. ಎನ್.ಎಸ್.ಎಸ್ ಘಟಕಗಳು ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನದ ಪ್ರಯುಕ್ತ ನಡೆದ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

 “ಆತ್ಮಹತ್ಯೆಯ ನಿರೂಪಣೆಯನ್ನು ಬದಲಿಸುವುದು”ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತಿದೆ.ಆತ್ಮಹತ್ಯೆಯ ಗಂಭೀರತೆಯನ್ನು ತಿಳಿಸಿ, ಭರವಸೆಯನ್ನು, ಬೆಂಬಲವನ್ನು ಪರಿಣಾಮಕಾರಿಯಾಗಿ ಪಸರಿಸಿದಾಗ ಸ್ವಾಸ್ಥ್ಯ ಸಮಾಜವನ್ನು ಮತ್ತು ಆತ್ಮಹತ್ಯೆ ಶೂನ್ಯತೆಯ ಸಮುದಾಯವನ್ನು ನಿರ್ಮಿಸಲು ಸಾಧ್ಯ.

 ಆತ್ಮಹತ್ಯೆ ಒಂದು ಕಳಂಕ ಅಲ್ಲ ಆದರೆ ಅದು ಇಡೀ ಕುಟುಂಬವನ್ನು ಮಾತ್ರವಲ್ಲದೆ ಸಮಾಜವನ್ನೇ ಬಾಧಿಸುತ್ತದೆ.  ಒಂದು ವೇಳೆ ಮಾನಸಿಕ ಒತ್ತಡಗಳಿಗೆ ಒಳಗಾದ ಸಂದರ್ಭ ಬಂದರೆ ಆಪ್ತಸಮಾಲೋಚಕರ, ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಅಂತಹವರಿಗೆ ಸಾಮಾಜಿಕ ಬೆಂಬಲವನ್ನು ನೀಡಬೇಕು. ಪ್ರಸ್ತುತ ದಿನಗಳಲ್ಲಿ ನವ ಮಾಧ್ಯಮಗಳ ಪ್ರಭಾವವೋ ಏನೋ ಯುವಕರೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

 ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಅಧ್ಯಕ್ಷತೆಯನ್ನು ವಹಿಸಿದ್ದರು. 

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೋ. ಹರಿಶ್, ಎನ್.ಸಿ.ಸಿ ಅಧಿಕಾರಿ ವಿಜಯಲಕ್ಷ್ಮೀ ಎನ್.ಎಸ್.ಎಸ್. ಅಧಿಕಾರಿ ಶಾರದಾ ಉಪಸ್ಧಿತರಿದ್ದರು. ವಿದ್ಯಾರ್ಥಿನಿ ಶ್ರೇಷ್ಠಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments