ವಿಶ್ವಕರ್ಮ ಜಯಂತಿ ಎಲ್ಲ ಕುಶಲಕರ್ಮಿಗಳ ಹಬ್ಬವಾಗಲಿ

ಜಾಹೀರಾತು/Advertisment
ಜಾಹೀರಾತು/Advertisment

 ವಿಶ್ವಕರ್ಮ ಜಯಂತಿ ಎಲ್ಲ ಕುಶಲಕರ್ಮಿಗಳ ಹಬ್ಬವಾಗಲಿ

ಮೂಡುಬಿದಿರೆ : ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ  ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣಾ  ಕಾರ್ಯಕ್ರಮ ನಡೆಯಿತು.



ಶಾಸಕ ಉಮಾನಾಥ ಎ.ಕೋಟ್ಯಾನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈದು ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ವಿಶ್ವಕರ್ಮ ಯೋಜನೆ ಈ ದೇಶದ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ಇದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಸರಕಾರಿ ಆದೇಶದಂತೆ ನಡೆಯುವ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲ ಸಮುದಾಯಗಳ ಕುಶಲಕರ್ಮಿಗಳನ್ನು ಒಗ್ಗೂಡಿಸಲು ನಾವು ಪ್ರಯತ್ನಿಸಬೇಕಾಗಿದೆ ಎಂದರು. 


 ಮುನಿಯಾಲು ಜಿ.ಎಸ್. ಪುರಂದರ ಪುರೋಹಿತರು ಪ್ರಧಾನ ಉಪನ್ಯಾಸ ನೀಡಿ ಈ ಪ್ರಪಂಚದ ಸೃಷ್ಟಿಕರ್ತ ಪರಬ್ರಹ್ಮ ವಿಶ್ವಕರ್ಮನಿಗೆ ಆರಂಭ. ಆಂತ್ಯ ಎಂಬುದಿಲ್ಲ ಎಂಬಲ್ಲಿಂದ ತೊಡಗಿ ಪಂಚದೇವತಾಶಕ್ತಿ, ಪಂಚದೇವತಾ ತತ್ವ, ಜ್ಞಾನಸ್ವರೂಪಿ ಪಂಚಋಷಿಗಳು, ಪಂಚಗೋತ್ರಗಳು, ಪಂಚಮ ವೇದ ಮೊದಲಾದ ವಿಚಾರಗಳನ್ನು ತಿಳಿಸಿದರು.  ತಂತ್ರಜ್ಞಾನಗಳಿಗೆ ಮೂಲಚೇತನವಾದ ವಿಶ್ವಕರ್ಮ ಎಂಬ ಶಕ್ತಿ, ತತ್ವವನ್ನು ಸದಾ ಮನವರಿಕೆ ಮಾಡಿಕೊಂಡು, ವಿಶ್ವಕರ್ಮ ಜಯಂತಿಯಂಥ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯಗಳ ಕುಶಲಕರ್ಮಿಗಳನ್ನು ಒಳಗೊಂಡು ಇದನ್ನು ಆಚರಿಸಬೇಕಾಗಿದೆ' ಎಂದು ಕೋರಿದರು.

ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಪುರೋಹಿತ ಎನ್.ಜಯಕರ ಆಚಾರ್ಯ, ಪುರಸಭೆ ಮುಖ್ಯಾಧಿಕಾರಿ ಇಂದು  ಎಂ.,

ಅಲಂಗಾರು ಶ್ರೀ ಅಯ್ಯಸ್ವಾಮೀ ಮಠದ ವ್ಯವಸ್ಥಾಪಕ ಬಿ. ವಿಶ್ವನಾಥ ಆಚಾರ್ಯ, ಪಿಎಸ್‌ಐ ಸಿದ್ದಪ್ಪ ನರನೂರ, ಉಪತಹಶೀಲ್ದಾರ ತಿಲಕ್ ಮುಖ್ಯ ಅತಿಥಿಗಳಾಗಿದ್ದರು.


ಸಭಿಕರ ಪರವಾಗಿ ಮಾತನಾಡಿದ ಧನಂಜಯ ಮೂಡುಬಿದಿರೆ  ಅವರು ವಿಶ್ವಕರ್ಮ ಜಯಂತಿ ಸಂದರ್ಭ ವಿವಿಧ ಕುಶಲಕರ್ಮಿಗಳ ವಸ್ತು ಪ್ರದರ್ಶನ, ಹೊಸ ಸಂಶೋಧನೆಗಳಿಗೆ ಪುರಸ್ಕಾರ ಇವನ್ನೆಲ್ಲ ನಡೆಸಲು ಎಲ್ಲ ಸಮುದಾಯಗಳ ಕುಶಲಕರ್ಮಿಗಳನ್ನು ಪ್ರಾತಿನಿಧಿಕವಾಗಿರಿಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಉಪಸಮಿತಿಗಳಾಗಿ  ಸರಕಾರಿ ನೆಲೆಯಲ್ಲಿ ಆಚರಿಸಲಾಗುವ ವಿವಿಧ ಜಯಂತಿ ಕಾರ್ಯಕ್ರಮಗಳಿಗೆ ಸಾಕಷ್ಟು ಪೂರ್ವಭಾವಿಯಾಗಿ ಎಲ್ಲ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದರು.

 

ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರರಾದ ಎಂ.ಕೆ. ಬಾಲಕೃಷ್ಣ ಆಚಾರ್ಯ, ಶಿವರಾಮ ಆಚಾರ್ಯ, ಆಡಳಿತ ಸಮಿತಿ ಸದಸ್ಯರು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಉಪಾಧ್ಯಕ್ಷ ಭಾಸ್ಕರ ಆಚಾರ್ಯ ಹೊಸಬೆಟ್ಟು, ಕಾರ್ಯದರ್ಶಿ ಸುಧಾಕರ ಆಚಾರ್ಯ ಹೊಸಬೆಟ್ಟು, ಮಹಿಳಾ ಸಮಿತಿಯ ಜಯಶ್ರೀ ಜಗನ್ನಾಥ ಪುರೋಹಿತ, ಚಿನ್ನದ ಕೆಲಸಗಾರರ ಹಿತರಕ್ಷಣ ವೇದಿಕೆಯ ಅಧ್ಯಕ್ಷ ನವೀನ ಆಚಾರ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಗಣೇಶ ಆಚಾರ್ಯ, ನೆಲ್ಲಿಕಾರು ಹರೀಶ ಆಚಾರ್ಯ, ಗುರುಕಾಷ್ಟ ಶಿಲ್ಪ ಸಮಿತಿ ಅಧ್ಯಕ್ಷ  ಜಗದೀಶ ಆಚಾರ್ಯ ಮೊದಲಾದವರಿದ್ದರು.

ಉಪತಹಶೀಲ್ದಾರ ರಾಮ ಕೆ. ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Post a Comment

0 Comments