ದರೆಗುಡ್ಡೆ ಗ್ರಾಮಸಭೆ:
ವಿದ್ಯುತ್ ತಂತಿಗಳಿಗೆ ಸ್ಪರ್ಶಿಸುತ್ತಿರುವ ಮರದ ಗೆಲ್ಲುಗಳನ್ನು ತೆಗೆಯದ್ದಕ್ಕೆ ಗ್ರಾಮಸ್ಥರಿಂದ ತರಾಟೆ
ಮೂಡುಬಿದಿರೆ: ಮುಖ್ಯರಸ್ತೆ ಹೊರತು ಪಡಿಸಿ ಒಳ ರಸ್ತೆಗಳಲ್ಲಿ ವಿದ್ಯುತ್ ತಂತಿಗಳನ್ನು ಸಂಪರ್ಕಿಸುವ ಮರದ ಗೆಲ್ಲುಗಳನ್ನು ಕಡಿಯದಿರುವ ಬಗ್ಗೆ ದರೆಗುಡ್ಡೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ದರೆಗುಡ್ಡೆ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ಮಳೆಗಾಲದ ತೀವ್ರತೆಗೆ ವಿದ್ಯುತ್ ಲೈನ್‌ಗಳು ತುಂಡಾಗಿ ಬಿದ್ದಿದರೂ ಇಲಾಖೆಯವರಿಗೆ ಸಂಪರ್ಕಿಸಿದಾಗ ಪ್ರಯೋಜನವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಡೆಂಗ್ಯೂ, ಮಲೇರಿಯ ಹಾವಳಿ ಇರುವ ಪ್ರದೇಶಗಳಲ್ಲಿ ಮದ್ದು ಸಿಂಪಡಣೆ ಮಾಡುವಂತೆ ಗ್ರಾಮಸ್ಥರು ಕೋರಿದರು.
ಕೃಷಿ ಹಾನಿ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅರಣ್ಯಾಧಿಕಾರಿ ಕೋರಿದರು. ಕೆಲ್ಲಪುತ್ತಿಗೆ ಕೆಂಪುಗುಡ್ಡೆ ೫ಸೆಂಟ್ಸ್ ಬಳಿ ಕೆಲವೊಂದು ಮನೆಗಳಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳನ್ನು ಕಡಿಯುವಂತೆ ಪಂಚಾಯತ್ ಅಧ್ಯಕ್ಷರು ಅರಣ್ಯ ಇಲಾಖೆಗೆ ತಿಳಿಸಿದರು. ಆಧಾರ್ ಪಹಣಿ ಜೋಡಣೆ ಬಗ್ಗೆ ಗ್ರಾಮಸ್ಥರು ಸಂಪರ್ಕಿಸುವಂತೆ ಗ್ರಾಮಕರಣಿಕರು ವಿನಂತಿಸಿದರು.
ತಂತ್ರಿ ಮನೆ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಕೋರಿದಾಗ ರಸ್ತೆಯ ಕುರಿತು ಕಾನೂನು ಹೋರಾಟದಲ್ಲಿರುವುದನ್ನು ಪಂಚಾಯತ್ ಅಧ್ಯಕ್ಷರು ತಿಳಿಸಿದರು.
ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಈಡಿಗೇರ ನೋಡೆಲ್ ಅಧಿಕಾರಿಯಾಗಿ ಇಲಾಖೆಯ ಅಧಿಕಾರಿಯಾಗಿ ಭಾಗವಹಿಸಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶುಭ, ಉಪ ವಲಯರಣ್ಯಧಿಕಾರಿ ಕಾವ್ಯ, ಗ್ರಾಮಕರಣಿಕ ಕಿಶೋರ್, ಕೃಷಿ ಇಲಾಖೆಯ ಸಂಜೀವ, ಆರೋಗ್ಯ ಇಲಾಖೆಯ ಮುದ್ದು, ಮೆಸ್ಕಾಂ ಅಪ್ಸರ್ ಪಾಟೀಲ್, ಶಿಕ್ಷಣ ಇಲಾಖೆಯ ಕರುಣಾಕರ ದೇವಾಡಿಗ ಇಲಾಖಾ ಮಾಹಿತಿ ನೀಡಿದರು.
ಪಂಚಾಯತ್ ಉಪಾಧ್ಯಕ್ಷೆ ನಳಿನಿ, ಸದಸ್ಯರಾದ ಸುಭಾಷ್ಚಂದ್ರ ಚೌಟ, ಮುನಿರಾಜ್ ಹೆಗ್ಡೆ, ಸಂತೋಷ್ ಪೂಜಾರಿ, ಗಂಗಾ, ತುಳಸಿ ಮೂಲ್ಯ, ಪ್ರಸಾದ್ ಬಿ., ಜನಿತಾ, ಶಶಿಕಲಾ, ದೀಕ್ಷಿತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು, ಕಾರ್ಯದರ್ಶಿ ಸತ್ಯಭಾಮ, ಸಿಬ್ಬಂದಿಗಳಾದ ಸುಕನ್ಯಾ, ನಯನ, ಯೋಗೀಶ್ ಈ ಸಂದರ್ಭದಲ್ಲಿದ್ದರು.
0 Comments