ಸೆಪ್ಟೆಂಬರ್‌ನಲ್ಲಿ ಮೀನು ಕೃಷಿಕರ ಬೃಹತ್ ಕಾರ್ಯಾಗಾರ-ಕೇಂದ್ರ ಮೀನುಗಾರಿಕಾ ಕಾರ್ಯದರ್ಶಿಯನ್ನು ಭೇಟಿಯಾದ ಕರಾವಳಿ ಸಂಸದರು

ಜಾಹೀರಾತು/Advertisment
ಜಾಹೀರಾತು/Advertisment

 ಸೆಪ್ಟೆಂಬರ್‌ನಲ್ಲಿ ಮೀನು ಕೃಷಿಕರ ಬೃಹತ್ ಕಾರ್ಯಾಗಾರ-ಕೇಂದ್ರ ಮೀನುಗಾರಿಕಾ ಕಾರ್ಯದರ್ಶಿಯನ್ನು ಭೇಟಿಯಾದ ಕರಾವಳಿ ಸಂಸದರು

ಸೆಪ್ಟೆಂಬರ್ ಎರಡನೇ ವಾರದಲ್ಲಿ ಕೇಂದ್ರ ಮತ್ತು ರಾಜ್ಯದ ಮೀನುಗಾರಿಕಾ ಇಲಾಖೆಯ ವತಿಯಿಂದ ಉಡುಪಿಯಲ್ಲಿ ನಡೆಯುವ ಮೂರು ದಿನಗಳ 'ಮತ್ಸ್ಯ ಸಂಪದ ಮೀನು ಕೃಷಿಕರ ಕಾರ್ಯಗಾರ'ಕ್ಕೆ ಮೀನುಗಾರಿಕಾ ಇಲಾಖೆಯ ಕೇಂದ್ರ ಕಾರ್ಯದರ್ಶಿಗಳಾದ ಶ್ರೀ ಅಭಿಲಾಶ್ ಲೇಖಿ ಅವರನ್ನು ಕರಾವಳಿ ಭಾಗದ ಸಂಸದರು ಭೇಟಿಯಾಗಿ ಚರ್ಚಿಸಿದರು.


ಮತ್ತು ಈ ಸಂದರ್ಭದಲ್ಲಿ ಕಾರ್ಯಾಗಾರದಲ್ಲಿ ನಡೆಯುವ ಚಟುವಟಿಕೆ, ಪ್ರಾತ್ಯಕ್ಷಿಕೆ ಮತ್ತು ವಿಷಯ ಮಂಡನೆ, ರಾಷ್ಟ್ರದ ವಿವಿಧ ರಾಜ್ಯಗಳ ಮೀನುಗಾರಿಕೆಯ ಪ್ರದರ್ಶನ ಇವುಗಳ ಬಗ್ಗೆ ವಿವರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೇಂದ್ರ ಸರ್ಕಾರದ ಪೂರ್ಣ ಸಹಕಾರ ಕೋರಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.

Post a Comment

0 Comments