ಮೂಡುಬಿದಿರೆ: ಮಹಾವೀರ ಕಾಲೇಜಿನಲ್ಲಿ ಎನ್‌ಎಸ್‌ಎಸ್ ರಾಷ್ಟ್ರೀಯ ಏಕತಾ ಶಿಬಿರಕ್ಕೆ ಚಾಲನೆ
ಮೂಡುಬಿದಿರೆ: ನಮ್ಮ ದೇಶದ ಪರಂಪರೆ, ಭಾಷೆ, ಸಂಸ್ಕೃತಿ, ಪ್ರದೇಶವನ್ನು ಗೌರವಿಸಿಕೊಂಡು ರಾಷ್ಟ್ರೀಯ ಮನೋಧರ್ಮವನ್ನು ಅರಿತುಕೊಳ್ಳುವುದರ ಜತೆಗೆ ಪರಸ್ಪರ ಭಾಷೆಯನ್ನು ಅರ್ಥೈಸಿಕೊಂಡು ನಮ್ಮ ವ್ಯಕ್ತಿತ್ವವನ್ನು ಉನ್ನತೀಕರಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ.ಎನ್. ಧರ್ಮ ಅಭಿಪ್ರಾಯಪಟ್ಟರು
ಅವರು ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರೀಯ ಏಕತಾ ಶಿಬಿರವನ್ನು ಬುಧವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ವಿಶ್ವಸ್ಥ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ ಸರಕಾರ ಯುವ ಸಬಲೀಕರಣಕ್ಕೆ ನೀಡುವ ಆದ್ಯತೆ ಎಲ್ಲರಿಗೂ ಮಾದರಿ ಎಂದರು.
ಎನ್‌ಎಸ್‌ಎಸ್ ರಾಷ್ಟ್ರೀಯ ವಲಯ ನಿರ್ದೇಶಕ ಡಿ. ಕಾರ್ತಿಕ್ ಎ.ಎನ್., ಎನ್‌ಎಸ್‌ಎಸ್ ರಾಜ್ಯ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ. ರಾಧಕೃಷ್ಣ ಮುಖ್ಯ ಅತಿಥಿಗಳಾಗಿದ್ದರು.
ಸಮಾರಂಭದಲ್ಲಿ ಪ್ರೊ. ಪಿ.ಎನ್. ಧರ್ಮರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪದಕ ನೀಡಿ ಗೌರವಿಸಲಾಯಿತು. ಮಹಾವೀರ ಪಿ.ಯು. ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್, ಹಾಲಿ ಮಂಗಳೂರು ವಿವಿ ಎನ್‌ಎಸ್‌ಎಸ್ ಕೋಆರ್ಡಿನೇಟರ್ ನಾಗರತ್ನ ಕೆ., ಮುಂದಿನ ಕೋಆರ್ಡಿನೇಟರ್ ಡಾ. ಶೇಸಪ್ಪ ಅಮೀನ್ ವೇದಿಕೆಯಲ್ಲಿದ್ದರು.
ನಾಗರತ್ನ ಕೆ. ಸ್ವಾಗತಿಸಿದರು. ರವಿ ಪ್ರಭಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಶಾರಾದ ರಾಜ್ ಧನ್ಯವಾದವಿತ್ತರು.
ಈ ಶಿಬಿರದಲ್ಲಿ ಕರ್ನಾಟಕ,ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳ 105 ಸ್ವಯಂಸೇವಕರು ಭಾಗವಹಿಸಿದ್ದಾರೆ.
0 Comments