ಮೂರು ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಹಿರಿಯ ಸೂಲಗಿತ್ತಿ ಮುತ್ತು ಪೂಜಾರ್ತಿ ಇನ್ನಿಲ್ಲ

ಜಾಹೀರಾತು/Advertisment
ಜಾಹೀರಾತು/Advertisment

 ಮೂರು ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಹಿರಿಯ ಸೂಲಗಿತ್ತಿ ಮುತ್ತು ಪೂಜಾರ್ತಿ ಇನ್ನಿಲ್ಲ

ಮೂಡುಬಿದಿರೆ : ನಾಟಿ ವೈದ್ಯ ಪದ್ಧತಿಯಲ್ಲಿ ಸುಮಾರು 3000ಕ್ಕೂ ಅಧಿಕ  ಹೆರಿಗೆ ಮಾಡಿಸಿ ಜನಮನ್ನಣೆ ಗಳಿಸಿದ್ದ ಹಿರಿಯ ಸೂಲಗಿತ್ತಿ  ಕೆಲ್ಲಪುತ್ತಿಗೆಯ ಮುತ್ತು ಪೂಜಾರ್ತಿ (82) ಅವರು ಸೋಮವಾರ ನಿಧನ ಹೊಂದಿದ್ದಾರೆ.

ಆಧುನಿಕ ವೈದ್ಯ ಪದ್ಧತಿಯಲ್ಲಿ ಹೆರಿಗೆ ಚಿಕಿತ್ಸೆ ಲಭಿಸುವುದಕ್ಕೂ ಮೊದಲು ನಾಟಿ ವೈದ್ಯ ಪದ್ಧತಿಯಲ್ಲಿ ಹೆರಿಗೆಯನ್ನು ಮಾಡಲು ಆರಂಭಿಸಿದ ಮುತ್ತು ಅವರು ಮೂಲತ: ಪೆರಾಡಿ ಕಾಶಿಪಟ್ಣದ ಕಾಂತಪ್ಪ-ಕಮಲಾ ಪೂಜಾರ್ತಿ ದಂಪತಿಯ ಪುತ್ರಿ.

  ಆಧುನಿಕ ಶಿಕ್ಷಣ ಪಡೆಯದೆ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಬಾಲ್ಯದಲ್ಲಿ ಪರಂಪರಾಗತವಾಗಿ ಬಂದ ಪ್ರಸೂತಿ ವೈದ್ಯಪದ್ಧತಿಯನ್ನು ಮುಂದುವರಿಸಿ ಅದನ್ನೇ ವೃತ್ತಿಯಾಗಿರಿಸಿಕೊಂಡು ಮದುವೆಯ ಬಳಿಕ ಕೆಲ್ಲಪುತ್ತಿಗೆಯಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡಿದ್ದರು.

  ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ಸ್ವಯಂ ಆಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆಯನ್ನು ಮಾಡುತ್ತಿದ್ದರು. ಕಳೆದ ಅರವತ್ತು ವರ್ಷಗಳಲ್ಲಿ ಉತ್ಕೃಷ್ಠ ಸೇವೆಯನ್ನು ನೀಡಿದ ಮುತ್ತು ಅವರನ್ನು ಮೂಡುಬಿದಿರೆ ಯುವವಾಹಿನಿ ಘಟಕ ಸಹಿತ ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.

Post a Comment

0 Comments