ಮೂಡುಬಿದಿರೆಯಲ್ಲಿ ನಾಳೆ ವಾಹನ ಸಂಚಾರ ಬದಲಾವಣೆ
ಮೂಡುಬಿದಿರೆ: ಶ್ರೀ ಕೃಷ್ಣ ಜನ್ಮಾಷ್ಠಮಿಯ ಉತ್ಸವದ ಅಂಗವಾಗಿ ಇಲ್ಲಿನ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ ಇದರ 108ನೇ ವರ್ಷದ ಮೊಸರು ಕುಡಿಕೆ ಶೋಭಾಯಾತ್ರೆಯು ನಗರದ ರಾಜ ಬೀದಿಯಲ್ಲಿ ಸಂಚರಿಸಲಿರುವುದರಿಂದ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಸಾರ್ವಜನಿಕರು ತಮ್ಮ ವಾಹನವನ್ನು ಮಧ್ಯಾಹ್ನ 01.00 ಗಂಟೆಯ ನಂತರ ಮೂಡುಬಿದಿರೆ ನಗರಕ್ಕೆ ಬಾರದೇ ಮೆರವಣಿಗೆ ಮುಗಿಯುವವರೆಗೆ ಹೊರಗಿನ ವರ್ತುಲಾ [ರಿಂಗ್ ರೋಡ್) ರಸ್ತೆಯಲ್ಲಿ ಸಂಚರಿಸಿ ಸಹಕರಿಸುವಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
0 Comments