ಪಾಲಡ್ಕ ಗ್ರಾಮಸಭೆ: ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಆಗ್ರಹ

ಜಾಹೀರಾತು/Advertisment
ಜಾಹೀರಾತು/Advertisment

 ಪಾಲಡ್ಕ ಗ್ರಾಮಸಭೆ: ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಆಗ್ರಹ

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಕಡಂದಲೆ ಪಲ್ಕೆ ಶ್ರೀ ಗಣೇಶ್ ದರ್ಶನ ಸಭಾಂಗಣದಲ್ಲಿ ಜರುಗಿತು.



ಪಾಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ವಿವಿಧ ಚರ್ಚೆಗಳು ನಡೆದವು.

 ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ 10 ಎಕ್ರೆ ಜಾಗವನ್ನು ಕಾಯ್ದಿರಿಸಿದ್ದು ಅದರಲ್ಲಿ ಅಪಾಯಕಾರಿ ಮರಗಳಿದ್ದು ಅದನ್ನು ತೆರವುಗೊಳಿಸಲು ಅರಣ್ಯಾಇಲಾಖೆಗೆ ಮನವಿ ಮಾಡಲಾಗಿದ್ದು ಕೆಲವು ಮರಗಳನ್ನು ತೆರವುಗೊಳಿಸಿದ್ದಾರೆ.ಇನ್ನೂ ಹೆಚ್ಚಿನ ಅಪಾಯಕಾರಿ ಮರಗಳಿದ್ದು ಅವುಗಳನ್ನು ತೆರವುಗೊಳಿಸದೆ ಇರುವುದರಿಂದ ನಿವೇಶನ ಹಂಚಿಕೆಗೆ ಕಷ್ಟವಾಗಿದೆ ಆದ್ದರಿಂದ ತಕ್ಷಣ ಕ್ರಮಕೈಗೊಳ್ಳುವಂತೆ ಸಭೆಯ ನೋಡೆಲ್ ಅಧಿಕಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. 


   ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಗುವ ಸವಲತ್ತುಗಳಾದ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೂರಕ ಆಹಾರದ ಬಗ್ಗೆ ಹಾಗೂ ಭಾಗ್ಯ ಲಕ್ಷ್ಮಿ ಯೋಜನೆ, ಮಾತೃ ವಂದನಾ ಯೋಜನೆ, ಬಾಲ್ಯ ವಿವಾಹ ತಡೆಗಟ್ಟುವ ಬಗ್ಗೆ ಸಭೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ಛಿಚಾರಕರಾದ ರತಿಶೆಟ್ಟಿ ಇವರು ಮಾಹಿತಿ ನೀಡಿದರು.

ಮೆಸ್ಕಾಂ ಇಲಾಖೆಯ ಕಿರಿಯ ಎಂಜಿನಿಯರ್  ಮಮತಾ ಎಂ  ಇಲಾಖಾ ಮಾಹಿತಿ ನೀಡುತ್ತಿದ್ದಾಗ  ಗ್ರಾಮಸ್ಥರು ಮಾತನಾಡಿ ರಸ್ತೆ ಬದಿಯಲ್ಲಿ ವಿದ್ಯುತ್ ತಂತಿಗಳಿಗೆ  ಬಾಗಿರುವ ಅಪಾಯಕಾರಿ ಮರದ ಗೆಲ್ಲುಗಳನ್ನು ತೆರವುಗೊಳಿಸುವಂತೆ  ಆಗ್ರಹಿಸಿದರು. 

ಬೋಮಾರು ಮತ್ತು ಬಲ್ಯಾಡಿ ರಸ್ತೆಯಲ್ಲಿ ವಿದ್ಯುತ್ ತಂತಿ ಕಂಬಗಳು ಹಳೆದಾಗಿದ್ದು  ಬದಲಾಯಿಸುವ ಅಗತ್ಯವಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ವಾಡ್ ೯  ಸದಸ್ಯೆ ಸುನಿತಾ ಶೆಟ್ಟಿ ರಂಜಿತ್ ರಾಜ್ ಭಂಡಾರಿ ಇವರು ಅಗ್ರಹಿಸಿದರು.

 ಮಳೆಗಾಲದಲ್ಲಿ ತುರ್ತು  ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಲೈನ್ ಮೆನ್ ಗಮನಕ್ಕೆ ತರುವಂತೆ 

ಗ್ರಾಮಸ್ಥರು ಆಗ್ರಹಿಸಿದರು. 



 ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಅನುದಾನಿತ ಹೈಸ್ಕೂಲ್‌ನಲ್ಲಿ ಓರ್ವ ಶಿಕ್ಷಕರು ಏಕಕಾಲಕ್ಕೆ ಎರಡು ಪದವಿ ಪಡೆದ ಬಗ್ಗೆ ಪ್ರಮಾಣ ಪತ್ರ ಹಾಜರುಪಡಿಸಿ ದೈಹಿಕ ಶಿಕ್ಷಕ ಹುದ್ದೆ ಪಡೆದಿದ್ದು ಈ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ತನಿಖೆ ನಡೆಸಬೇಕು ಎಂದು ಭಾಸ್ಕರ ಪಾಲಡ್ಕ ಅವರು ಮನವಿ ಸಲ್ಲಿಸಿದರು. ಸದ್ರಿಯವರ ಮನವಿಯನ್ನು ಸೂಕ್ತ ಕ್ರಮಕ್ಕಾಗಿ ಶಿಕ್ಷಣ ಇಲಾಖೆಗೆ ಕಳುಹಿಸುವಂತೆ ಸಭೆಯ ನೋಡಲ್‌ ಅಧಿಕಾರಿ ಸೂಚಿಸಿದರು.


ಉಪವಲಯಾರಣ್ಯಾಧಿಕಾರಿ  ಮಂಜುನಾಥ ಗಾಣಿಗ, ಪಾಲಡ್ಕ ಪ್ರಾ.ಆ.ಕೇಂದ್ರದ ಆರೋಗ್ಯಾಧಿಕಾರಿ ಡಾ. ಅನಿಲ್ ಪಿಂಟೋ, ಗ್ರಾಮಕರಣಿಕ ಅನಿಲ್ ಕುಮಾರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಕೆಎಂಎಫ್‌ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್‌ ಸಿಕ್ವೇರ, ಪಂಚಾಯತ್‌ ಸದಸ್ಯರು, ಪಿಡಿಒ ರಕ್ಷಿತಾ ಡಿ., ಸಿಬಂಧಿ ವರ್ಗ, ಗ್ರಾಮಸ್ಥರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments