ಆಳ್ವಾಸ್ ಸಹಕಾರ ಸಂಘ ಮಹಾಸಭೆ
೩.೩೬ ಕೋಟಿ ಲಾಭ, ಶೇ.೧೭ ಡಿವಿಡೆಂಟ್
ಮೂಡುಬಿದಿರೆ : ಆಳ್ವಾಸ್ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಶನಿವಾರ ಮಹಾಸಭೆಯು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಸಂಘವು ೭೯.೧೨ ಕೋಟಿ ಠೇವಣಿ ಹೊಂದಿ ೭೬.೮೦ ಕೊಟಿ ಸಾಲ ನೀಡಿದೆ. ೮೭.೭೮ ಕೊಟಿ ದುಡಿಯುವ ಬಂಡವಾಳ ಹೊಂದಿದೆ. ೩.೩೬ ಕೋಟಿ ಲಾಭ ಗಳಿಸಿದ್ದು ಸದಸ್ಯರಿಗೆ ಶೇ. ೧೭ ಡಿವಿಡೆಂಟ್ ನೀಡುವುದಾಗಿ ಘೊಷಿಸಿದರು.
ಸಮಾಜಮುಖಿ ಚಿಂತನೆಯೊಂದಿಗೆ ಹುಟ್ಟಿಕೊಂಡ ಈ ಸಂಸ್ಥೆಯು ಮುಂದಿನ ವರ್ಷ ೯೦ರಿಂದ ೧೦೦ ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಿದೆ. ಗ್ರಾಹಕರ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡು ಬದ್ಧತೆ, ವ್ಯವಹಾರದಲ್ಲಿ ಪಾರದರ್ಶಕತೆಯಿಂದ ಕೆಲಸ ಮಾಡುತ್ತಿದ್ದು ಸಂಸ್ಥೆಯು ಪ್ರಗತಿಯತ್ತ ಸಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಹಕಾರ ಶಿಕ್ಷಣ ನಿಧಿಯಿಂದ ೩.೦೩ಲಕ್ಷ ಮೊತ್ತದ ಚೆಕ್‌ನ್ನು ಸಹಕಾರ ತರಬೇತಿ ಕೇಂದ್ರಕ್ಕೆ ಅವರು ಹಸ್ತಾಂತರಿಸಿದರು. ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ೬೨೫ ಅಂಕ ಗಳಿಸಿದ್ದು ಪ್ರಸ್ತುತ ಆಳ್ವಾಸ್‌ನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಂಕಿತಾ ಬಸಪ್ಪ ಕೊನ್ನೂರು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ೬೧೭ಕ್ಕಿಂತ ಅಧಿಕ ಅಂಕಗಳಿಸಿದ ಮುರುಗೇಶ್ ಬಿರಾದರ್ ಪಾಟೀಲ್, ರುತುರಾಜ ರಾಮಚಂದ್ರ ಚಿನಗೆ, ಸ್ಟೇಟ್ ಸಿಲೆಬಸ್‌ನ ಮನಿಷಾ ಸಹಿತ ೭ ಮಂದಿ ವಿದ್ಯಾರ್ಥಿಗಳಿಗೆ ಹಾಗೂ ಈ ಬಾರಿಯ ಪದವಿ ಪರೀಕ್ಷೆಯಲ್ಲಿ ವಿವಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ದೀಕ್ಷಾ ಶೆಟ್ಟಿ ಇವರನ್ನು ಸನ್ಮಾನಿಸಿ ತಲಾ ೧೦ ಸಾವಿರ ನಗದು ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಮೋಹನ ಪಡಿವಾಳ್, ನಿರ್ದೇಶಕರಾದ ಕೆ. ಶ್ರೀಪತಿ ಭಟ್, ನಾರಾಯಣ ಪಿ.ಎಂ, ಜಯರಾಮ ಕೋಟ್ಯಾನ್, ವಿವೇಕ್ ಆಳ್ವ, ಮಹಮ್ಮದ್ ಶರೀಫ್, ಪ್ರಕಾಶಿನಿ ಹೆಗ್ಡೆ, ರಮೇಶ್ ಶೆಟ್ಟಿ, ಮೀನಾಕ್ಷಿ ಬಿ. ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.
ಜಯರಾಮ ಕೋಟ್ಯಾನ್ ವಂದಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
0 Comments