ಆ.೨೭ ಮೂಡುಬಿದಿರೆಯಲ್ಲಿ ಕೃಷ್ಣೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಆ.೨೭ ಮೂಡುಬಿದಿರೆಯಲ್ಲಿ ಕೃಷ್ಣೋತ್ಸವ 


 ಮೂಡುಬಿದಿರೆ : ಶ್ರೀ ಗೋಪಾಲಕೃಷ್ಣ ದೇವಸ್ಥಾನದ ೧೦೮ನೇ ವರ್ಷದ ಮೊಸರುಕುಡಿಕೆ ಉತ್ಸವದಂಗವಾಗಿ ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಕೃಷ್ಣೋತ್ಸವವು ಆ.೨೭ರಂದು ನಡೆಯಲಿದೆ. 

ಫೌಂಡೇಶನ್‌ನ ಅಧ್ಯಕ್ಷ ಅಮರ್‌ಕೋಟೆ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. 

ಉತ್ಸವದಂಗವಾಗಿ ಆ.೨೫ರಂದು ಸ್ವರಾಜ್ಯ ಮೈದಾನದಲ್ಲಿ ಅಷ್ಟಮಿದ ಗೊಬ್ಬು ಕ್ರೀಡಾಕೂಟ ಆಯೋಜಿಸಿದ್ದು ವಿವಿಧ ಸಾಂಪ್ರದಾಯಿಕ ಆಟಗಳ ಸ್ಫರ್ಧೆ ನಡೆಯಲಿದೆ. ಸಾರ್ವಜನಿಕರಿಗಾಗಿ ಮುದ್ದುಕೃಷ್ಣ ರೀಲ್ಸ್ ಸ್ಫರ್ಧೆಯನ್ನು ಆಯೋಜಿಸಲಾಗಿದೆ. ಆ.೨೭ರಂದು ಕೃಷ್ಣನ ಮೃಣ್ಮಯ ಮೂರ್ತಿಯ ಮೆರವಣಿಗೆ ನಡೆಯಲಿದ್ದು ಮಧ್ಯಾಹ್ನ ೩ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ವೆಂಕಟಕೃಷ್ಣ ಮತ್ತು ಬಳಗದವರಿಂದ ಭಕ್ತಿಭಾವ ಸಂಗೀತ ರಸಮಂಜರಿ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಶಿವಾನಂದ ಪ್ರಭು ಹಾಗೂ ಮುಖ್ಯಮಂತ್ರಿಗಳ ಪದಕ ವಿಜೇತ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಅವರನ್ನು ಸನ್ಮಾನಿಸಲಾಗುವುದು ಹಾಗೂ ವಿವಿಧ ಸ್ಫರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಗುವುದು. ಸಂಜೆ ೬.೩೦ರಿಂದ ದಿನೇಶ್ ಕೋಡಪದವು ಸಾರಥ್ಯದಲ್ಲಿ ಯಕ್ಷತೆಲಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜವನೆರ್ ಬೆದ್ರ ಸಂಘಟನೆಯ ಕಾರ್ಯದರ್ಶಿ ಗಣೇಶ್ ಪೈ, ಯುವಘಟಕದ ಅಧಕ್ಷ ನಾರಾಯಣ ಪಡುಮಲೆ, ಮನು ಒಂಟಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments