ಶಿರ್ತಾಡಿಯಲ್ಲಿ ಮೊದಲ ಕಾನೂನು ಕಾಲೇಜನ್ನು ಉದ್ಘಾಟಿಸಿದ ಆಂಧ್ರ ಪ್ರದೇಶದ ರಾಜ್ಯಪಾಲ ಅಬ್ದುಲ್ ನಝೀರ್
ಮೂಡುಬಿದಿರೆ: ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯ ಮತ್ತು ಭಾರತೀಯ ಬಾರ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರುವ ಶಿರ್ತಾಡಿಯ ಭುವನಜ್ಯೋತಿಯಲ್ಲಿ ಮೊದಲ ಕಾನೂನು ವಿದ್ಯಾಲಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಆಂದ್ರಪ್ರದೇಶದ ರಾಜ್ಯಪಾಲರಾದ ಅಬ್ದುಲ್ ನಝೀರ್ ಅವರು ಶನಿವಾರ ಉದ್ಘಾಟಿಸಿದರು.
ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟಿಸ್ ಕೃಷ್ಣ ಎಸ್.ದೀಕ್ಷಿತ್, ಕರ್ನಾಟಕ ರಾಜ್ಯ ಕಾನೂನು ವಿ.ವಿ.ಹುಬ್ಬಳ್ಳಿ ಇದರ ಉಪಕುಲಪತಿ ಡಾ.ಸಿ.ಬಸವರಾಜು, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷರಾದ ವಿಶಾಲರಘು ಎಚ್‌ಎಲ್ ಹಾಗೂ ದ.ಕ.ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ರವೀಂದ್ರ ಎಂ.ಜೋಶಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಭುವನಜ್ಯೋತಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಆರ್.ಪ್ರಶಾಂತ್ ಡಿಸೋಜ, ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರದೀಪ್ ಎಂ.ಡಿ. ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪ್ರಭು,ಸಂಚಾಲಕ ಪ್ರಶಾಂತ್ ಎನ್, ಖಜಾಂಚಿ ಲತಾ ಎ. ಉಪಸ್ಥಿತರಿದ್ದರು.
0 Comments