ಹೊಸ ವಕೀಲರು ನವ ತಂತ್ರಜ್ಞಾನವನ್ನು ಅರಿತುಕೊಳ್ಳಿ : ರಾಜ್ಯಪಾಲ ಅಬ್ದುಲ್ ನಝೀರ್ ಕಿವಿಮಾತು
ಮೂಡುಬಿದಿರೆ : ಕಾನೂನು ಪಾಲನೆ ನಮ್ಮ ಮನೆಯಿಂದ ಆರಂಭಗೊಳ್ಳಬೇಕು. ವಕೀಲ ವೃತ್ತಿಯನ್ನು ಪಡೆಯಲು ಇಚ್ಚಿಸುವವರು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಮತ್ತು ನವ ತಂತ್ರಜ್ಞಾನಗಳ ಬಗ್ಗೆ ಅರಿತುಕೊಳ್ಳಬೇಕು ಎಂದು ಆಂಧ್ರಪ್ರದೇಶ ರಾಜ್ಯಪಾಲರಾದ ಜಸ್ಟಿಸ್ ಎಸ್. ಅಬ್ದುಲ್ ನಜೀರ್ ಕಿವಿಮಾತು ಹೇಳಿದರು.
ಅವರು ಶಿರ್ತಾಡಿ ಭುವನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಕಾಲೇಜನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ 5 ಕೋಟಿ ವ್ಯಾಜ್ಯಗಳು ಇನ್ನೂ ಕೂಡಾ ಕೋಟ್ ೯ನಲ್ಲಿ ಕೊಳೆಯುತ್ತಿದ್ದು ಇದರಿಂದಾಗಿ 25 ಕೋಟಿ ಜನರಿಗೆ ಪರಿಣಾಮ ಬೀರುತ್ತಿದ್ದು ಇದು ವಿಳಂಬತೆಯನ್ನು ಸೂಚಿಸುತ್ತದೆ. ಸಿವಿಲ್ ವ್ಯಾಜ್ಯಗಳ ಬಗ್ಗೆ ತುಂಬಾ ಗಂಭೀರ ಚಿಂತನೆ ಅಗತ್ಯ. ಕಾನೂನು ನ್ಯಾಯ ಕೋರಿ ಬರುವ ಸಂತ್ರಸ್ತರಿಗೆ ಸಮರ್ಪಕ ನ್ಯಾಯ ಸಿಗುವಂತಾಗಬೇಕು ಎಂದರು.
ಕಾನೂನು ಜ್ಞಾನ ದೇಶ ಕಟ್ಟುವಲ್ಲಿ ಉತ್ತಮ ವ್ಯವಸ್ಥೆ. ಕಾನೂನು ಬದ್ದ ನಡವಳಿಕೆಯನ್ನು ಅನುಭವಿಸುವಂತಾಗಬೇಕು ಎಂದ ಅವರು ಕಾನೂನು ಪುರುಷನಷ್ಟೇ ಮಹಿಳೆಗೂ ಸಮಾನ ಪಾಲು, ಸ್ಥಾನ ಸಿಗಲಿ ಎಂದರು.
ಕರ್ನಾಟಕದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಕೃಷ್ಣ ಎಸ್. ದೀಕ್ಷಿತ್ ಜ್ಞಾನದಿಂದ ಜೀವನ ದರ್ಶನ ಸಾಧ್ಯ, ಜ್ಞಾನಕ್ಕೆ ಸಮಾನವಾದುದು ಇನ್ನೊಂದಿಲ್ಲ ಎನ್ನುತ್ತಾನೆ ಭಗವಾನ್ ಕೃಷ್ಣ. ಜ್ಞಾನ ಬೆಳಕನ್ನು ಅರಸುವ ನಾಡು ಭಾರತ. ರಾಷ್ಟ್ರದಲ್ಲಿ ಪ್ರಮುಖವಾಗಿ 24 ವಿವಿ ಗಳು ಪುರಾತನ ದಲ್ಲೇ ಇತ್ತು ಎಂದರು.ಸಂವಿಧಾನ ರಚನೆಯಲ್ಲಿ ಮಣ್ಣಿನ ಗುಣ ಇದೆ. ನಮ್ಮ ಸಂವಿಧಾನ ಸಧ್ರುಡವಾದುದು ಎಂದ ಅವರು ಜ್ಞಾನ ಬೆಳಕಿನ ಹೆಜ್ಜೆ ತೋರುತ್ತದೆ. ಈ ಮೂಲಕ ದೇಶ ಕಟ್ಟಲು ಅನುಕೂಲ ವಾಗುತ್ತದೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ಕಾನೂನು ಕಾಲೇಜಿನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಸಿ. ಬಸವರಾಜುರವರು ರಾಜ್ಯದಲ್ಲಿ 143 ಕಾನೂನು ಕಾಲೇಜುಗಳಿದ್ದು, ಕಾನೂನು ಅವಶ್ಯಕತೆಗೆ ಸ್ಪಂದಿಸುತ್ತಿದೆ. ದುರ್ಬಲರು, ಆರ್ಥಿಕವಾಗಿ ಅಕ್ಷರದಿಂದ ದೀನರಾದವರಿಗೆ ಕಾನೂನು ಬೆಂಬಲ ಬೇಕಾಗಿದೆ. ಸಮಾಜದಲ್ಲಿರುವ ಈ ಸಮಸ್ಯೆಗೆ ಸ್ಪಂದಿಸಬೇಕಾಗಿದೆ, ನಮ್ಮ ವಿದ್ಯಾಭ್ಯಾಸದ ಮೌಲ್ಯಗಳೊಂದಿಗೆ ನಡೆಯಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ವಿಶಾಲರಘು ಎಚ್. ಎಲ್., ಜಿಲ್ಲಾ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯದ ನ್ಯಾಯಧೀಶರಾದ ರವೀಂದ್ರ ಎಂ. ಜೋಷಿ ಮಾತನಾಡಿ ಶುಭ ಹಾರೈಸಿದರು.
ಭುವನಜ್ಯೋತಿ ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ಪ್ರಭು, , ಕೋಶಾಧಿಕಾರಿ ಲತಾ ಎ., ಸಲಹೆಗಾರ ಶರಣಪ್ಪ ಎಂ. ಭಾವಿ, ಸದಸ್ಯರಾದ ಸುಬ್ರಹ್ಮಣ್ಯ ಕುಮಾರ್ ಎ., ಕೆ. ತಿರುಮಲೇಶ್ವರ ಭಟ್, ಪವನ್ ಕುಮಾರ್, ಮಯೂರ ಕೀರ್ತಿ, ಬಣ್ಣಡಿ ಸೋಮನಾಥ್ ಹೆಗ್ಡೆ ಉಪಸ್ಥಿತರಿದ್ದರು.
ಪ್ರಿನ್ಸಿಪಾಲ ಪ್ರಶಾಂತ್ ಎಂ. ಡಿ ಪ್ರಸ್ತಾವಿಕವಾಗಿ ಮಾತನಾಡಿ ಕಾಲೇಜು ಧ್ಯೇಯ ಉದ್ದೇಶ ಬಗ್ಗೆ ತಿಳಿಸಿದರು.ಕಾರ್ಯದರ್ಶಿ ಪ್ರಶಾಂತ್ ಡಿ ಸೋಜಾ ಸರ್ವರನ್ನು ಸ್ವಾಗತಿಸಿದರು. ಸಂಚಾಲಕ ಪ್ರಶಾಂತ್ ಎನ್. ಧನ್ಯವಾದವಿತ್ತರು. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.
0 Comments