ಯಕ್ಷರಂಗದ ಹಿರಿಯ ಕಲಾವಿದ ಮಿಜಾರು ತಿಮ್ಮಪ್ಪ & ಸಾಧಕರಿಗೆ ಅಭಿನಂದನೆ

ಜಾಹೀರಾತು/Advertisment
ಜಾಹೀರಾತು/Advertisment

 ಯಕ್ಷರಂಗದ ಹಿರಿಯ ಕಲಾವಿದ ಮಿಜಾರು ತಿಮ್ಮಪ್ಪ & ಸಾಧಕರಿಗೆ ಅಭಿನಂದನೆ

ಮೂಡುಬಿದಿರೆ: ಯಕ್ಷಮಿತ್ರರು ಮೂಡುಬಿದಿರೆ ಹಾಗೂ ಬಸ್ ಸ್ಟ್ಯಾಂಡ್ ಫ್ರೆಂಡ್ಸ್ ಬೆದ್ರ ಇವುಗಳ ವತಿಯಿಂದ ಯಕ್ಷರಂಗದ ಹಿರಿಯ ಕಲಾವಿದ  ಮಿಜಾರು ತಿಮ್ಮಪ್ಪ ಅವರಿಗೆ ಅಭಿನಂದನೆ, ಅಶಕ್ತ ಕಲಾವಿದರಿಗೆ ಸಹಾಯಹಸ್ತ  ಸಾಧಕರಿಗೆ ಅಭಿನಂದನೆ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು ಕನ್ನಡಭವನದಲ್ಲಿ ನಡೆಯಿತು.

  ಉದ್ಯಮಿ, ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

   

  ಶ್ರೀ ಮಹಾಗಣಪತಿ ಯಕ್ಷಗಾಮ ಮಂಡಳಿ(ರಿ) ನಿಡ್ಲೆ ಇದರ ಯಜಮಾನ ಗೋವಿಂದ ಭಟ್ ನಿಡ್ಲೆ ಮಾತನಾಡಿದರು.


ಅಭಿನಂದನೆ : ಯಕ್ಷ ರಂಗದ ಹಿರಿಯ ಕಲಾವಿದ ಮಿಜಾರು ತಿಮ್ಮಪ್ಪ, ಹಿರಿಯ ಪೌರ ಕಾರ್ಮಿಕ ಬೊಗ್ಗು, ಸಮಾಜ ಸೇವಕರಾದ ಅನಿಲ್ ಮೆಂಡೋನ್ಸ ಹಾಗೂ ಫಯಾಝ್ ಮಾಡೂರು ಅವರನ್ನು ಅಭಿನಂದಿಸಲಾಯಿತು.


 ಯಕ್ಷಗಾನ ನಾಗಸಿರಿಯ ಪ್ರಸಂಗ ಕರ್ತೃ ಗಣೇಶ್ ಬಿ.ಅಳಿಯೂರು, ಭಾಗವತ  ಕರುಣಾಕರ ಶೆಟ್ಟಿ ಕಾಶಿಪಟ್ಣ, 

ವೇದಿಕೆಯನ್ನು ಅಲಂಕರಿಸಿದ ಕುಮಾರ್ ಮಾಸ್ತಿಕಟ್ಟೆ ಅವರನ್ನು ಗುರುತಿಸಿ ಗೌರವಿಸಲಾಯಿತು.

ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್,  ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಮುಖಂಡ ಕೆ.ಅಶ್ವಥ್  ಪಣಪಿಲ, ಮೂಡಾ ಸದಸ್ಯ ಶೇಖರ ಪೂಜಾರಿ, ಉದ್ಯಮಿ ಇರ್ಫಾನ್, ಭಾಗವತರಾದ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಜ್ಯೋತಿಷಿ ಸುಧಾಕರ ತಂತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾರ್ಯಕ್ರಮದ ಆಯೋಜಕರಾದ ಹರೀಶ್ ದೇವಾಡಿಗ ಹಾಗೂ ನಾಗೇಶ್ ಬಂಗೇರ ಉಪಸ್ಥಿತರಿದ್ದರು.

  ಸುಧಾಕರ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಬಿ. ಅಳಿಯೂರು ಸ್ವಾಗತಿಸಿ ವಂದಿಸಿದರು.


 ನಂತರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ(ರಿ) ನಿಡ್ಲೆ ಹಾಗೂ ಅತಿಥಿ ಕಲಾವಿದರಿಂದ "ನಾಗಸಿರಿ" ಯಕ್ಷಗಾನ ಪ್ರದರ್ಶನಗೊಂಡಿತು.

Post a Comment

0 Comments