ನಾರಾಯಣ ಗುರು ಜಯಂತಿ
ಮೂಡುಬಿದಿರೆ : ಬೆಳುವಾಯಿ ನಾರಾಯಣಗುರು ಸೇವಾ ಸಂಘದ ವತಿಯಿಂದ ನಾರಾಯಣಗುರು ಜನ್ಮದಿನಾಚರಣೆ ಮತ್ತು ಗುರುಪೂಜೆಯು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಜರಗಿತು. ಬೆಳಿಗ್ಗೆ ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಬೆಳುವಾಯಿ, ಬ್ರಹ್ಮಶ್ರೀ ನಾರಾಯಣಗುರು ಸೇವಾದಳ ಬೆಳುವಾಯಿ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕ ಬೆಳುವಾಯಿ ಸಂಘಗಳು ಪಾಲ್ಗೊಂಡರು.
0 Comments