ಸಂವಿಧಾನ ಬಾಹಿರ ಹೇಳಿಕೆ ನೀಡಿರುವ ಕ್ರಮಕೈಗೊಳ್ಳುವಂತೆ ಯುವ ಮೋರ್ಚಾ ಮನವಿ
ಮೂಡುಬಿದಿರೆ: ಬಾಂಗ್ಲಾದೇಶದ ರೀತಿಯಲ್ಲಿ ಘನವೆತ್ತ ರಾಜ್ಯಪಾಲರನ್ನು ಒಡಿಸುತ್ತೇವೆ ಎಂದು ಸಂವಿಧಾನ ಬಾಹಿರ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ "ಐವನ್ ಡಿಸೋಜ" ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮೂಡುಬಿದಿರೆಯ ಯುವ ಮೋರ್ಚಾ ಪೊಲೀಸರಿಗೆ ಮನವಿ ನೀಡಿದೆ.
ದೇಶದ ಸಮಗ್ರತೆಗೆ ದಕ್ಕೆಯಾಗುವಂತಹ ಮತ್ತು ಸಂವಿಧಾನ ವಿರೋಧಿ,ಹೇಳಿಕೆ ನೀಡಿ ಜನರನ್ನು ತಪ್ಪು ದಾರಿಗೆ ಎಳೆದು ದಂಗೆ ಎಬ್ಬಿಸಲು ಹುರಿದುಂಬಿಸಿ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿ ಗಲಭೆ ಎಬ್ಬಿಸಿರುವ ಐವನ್ ಡಿಸೋಜ ವಿರುದ್ಧ ಕೇಸ್ ದಾಖಲಿಸುವಂತೆ ಮೂಡಬಿದಿರೆ ಪೋಲಿಸ್ ಸ್ಟೇಷನ್ ನಲ್ಲಿ, ಯುವಮೊರ್ಚಾ ಮುಲ್ಕಿ-ಮೂಡಬಿದಿರೆಯು ಒತ್ತಾಯಿಸಿದರು....*
ಈ ಸಮಯದಲ್ಲಿ ಯುವಮೊರ್ಚಾ ಮುಲ್ಕಿ-ಮೂಡಬಿದಿರೆ ಅಧ್ಯಕ್ಷ ಕುಮಾರ್ ಪ್ರಸಾದ್, ಕಾರ್ಯದರ್ಶಿ ಭರತ್ ಶೆಟ್ಟಿ, ಉಪಾಧ್ಯಕ್ಷ ಶ್ರೀನಿತ್ ಶೆಟ್ಟಿ ,ಒಬಿಸಿ ಕಾರ್ಯದರ್ಶಿ ಸಂಪತ್ ಕುಮಾರ್, ಕಾರ್ಯದರ್ಶಿ ರಕ್ಷೀತ್ , ನಾಗೇಶ್ ಹಾಗೂ ಕಾರ್ಯಕರ್ತರು ಉಪಸ್ಥಿತಿ ಇದ್ದರು...
0 Comments