ಮಿತಿ ಮೀರಿದರೆ ಬಂಧಿಸಿ ನಾರ್ಕೋಟಿಕ್ಸ್ ಪರೀಕ್ಷೆ ಮಾಡಬೇಕಾಗುತ್ತದೆ-ತಿಮರೋಡಿಗೆ ಎಚ್ಚರಿಕೆ ನೀಡಿದ ಹೈಕೋರ್ಟ್

ಜಾಹೀರಾತು/Advertisment
ಜಾಹೀರಾತು/Advertisment

 ಮಿತಿ ಮೀರಿದರೆ ಬಂಧಿಸಿ ನಾರ್ಕೋಟಿಕ್ಸ್ ಪರೀಕ್ಷೆ ಮಾಡಬೇಕಾಗುತ್ತದೆ-ತಿಮರೋಡಿಗೆ ಎಚ್ಚರಿಕೆ ನೀಡಿದ ಹೈಕೋರ್ಟ್

ಪದೇ ಪದೇ ನ್ಯಾಯಾಂಗವನ್ನು ನಿಂದಿಸುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ಇಂದು ಹೈಕೋರ್ಟ್ ಖಡಕ್ ಆಗಿಯೇ ಎಚ್ಚರಿಕೆ ನೀಡಿದೆ.


ನ್ಯಾಯಾಂಗ ‌ನಿಂದನೆ ಹಾಗೂ ನ್ಯಾಯಾಧೀಶರನ್ನು ಸಾರ್ವಜನಿಕವಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಷರತ್ತಾಗಿ ಕ್ಷಮೆಯಾಚಿಸಿ ಮಹೇಶ್ ಶೆಟ್ಟಿ ತಿಮರೋ‌ಡಿ‌ ಸಲ್ಲಿಸಿದ ಪ್ರಮಾಣ ಪತ್ರವನ್ನು ಪುರಸ್ಕರಿಸಿದ ನ್ಯಾಯಾಲಯವು ನ್ಯಾಯಾಧೀಶರನ್ನು ನಿಂದಿಸಿದ ಪ್ರಕರಣವನ್ನು ಮುಕ್ತಾಯಗೊಳಿದೆ.


ಇದರ ಹೊರತಾಗಿಯೂ ಭೂ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಅರ್ಜಿ ಮುಕ್ತಾಯಗೊಂಡಿರುವುದಿಲ್ಲವಾಗಿದ್ದು, ಆ ಪ್ರಕರಣದಲ್ಲಿ‌ ಇದೇ ಆಗಸ್ಟ್ 29 ನ್ಯಾಯಾಲಯದ ಮುಂದೆ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಕುದ್ದು ಹಾಜರಾತಿ ಗೆ ಆದೇಶ ಮಾಡಿತ್ತು. ಅದರಂತೆ ಇಂದು ನ್ಯಾಯಾಲಯದ ಮುಂದೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಆತನ ಪತ್ನಿ ಹಾಜರಾಗಿದ್ದಾರೆ.


ತಿಮರೋಡಿ‌‌‌‌‌‌ ಪದೇ ಪದೇ ನ್ಯಾಯಾಲಯದ ಆದೇಶಗಳನ್ನು ಮೀರಿ ವರ್ತಿಸುದರ ಬಗ್ಗೆ ಕೋಪಗೊಂಡ ನ್ಯಾಯಾಧೀಶರು ಮುಂದೆ ಹೀಗೆ ಮಾಡಿದ್ರೆ, ಬಂಧಿಸಿ ಕಾನೂನು ಕ್ರಮ ಜರಗಿಸುವ ಮೌಖಿಕ‌ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನ್ಯಾಯಾಂಗ ನಿಂದನೆ ಮಾಡಿ ನ್ಯಾಯಲಯದಲ್ಲಿ ಬಂದು ಸುಳ್ಳು ಹೇಳಿದ್ರೆ ನಾರ್ಕೋಟಿಕ್ಸ್ ಪರೀಕ್ಷೆಗೆ ಆದೇಶ ಮಾಡ್ತೇನೆ ಎಂದು ಎಚ್ಚರಿಸಿದ್ದಾರೆ.

Post a Comment

0 Comments