ಸರ್ವೋದಯ ಫ್ರೆಂಡ್ಸ್ ನ 16ನೇ ವರ್ಷದ ಹುಲಿವೇಷ ಆಮಂತ್ರಣ ಪತ್ರಿಕೆ ಬಿಡುಗಡೆ
ಮೂಡುಬಿದಿರೆ: 61ನೇ ವರ್ಷದ ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಸರ್ವೋದಯ ಫ್ರೆಂಡ್ಸ್ ಬೆದ್ರ(ರಿ) ನಡೆಸುವ 16ನೇ ವರ್ಷದ ಹುಲಿವೇಷದ ಆಮಂತ್ರಣ ಪತ್ರಿಕೆಯನ್ನು ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ ಬುಧವಾರ ಸಂಜೆ ಸಮಾಜ ಮಂದಿರದಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು ಯುವಕರಲ್ಲಿ ಉತ್ಸಾಹ, ಉತ್ತಮ ಸಂಸ್ಕಾರ ಅದರ ಜತೆಗೆ ಶಿಸ್ತು ಇದ್ದಾಗ ದೈವೀಶಕ್ತಿಯ ಹಾರೈಕೆ ಸದಾ ಇರುತ್ತದೆ. ಸರ್ವೋದಯ ಫ್ರೆಂಡ್ಸ್ ನವರು ಗಣೇಶೋತ್ಸವದ ಸಂದರ್ಭದಲ್ಲಿ ಹುಲಿವೇಷದ ತಂಡವನ್ನು ಮಾಡುವುದಲ್ಲದೆ ಜನರಿಗೆ ಸಹಾಯವಾಗುವಂತಹ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ ಎಂದ ಅವರು ಉತ್ತಮ ಕಾರ್ಯಕ್ರಮಗಳನ್ನು ಮಾಡುವಾಗ ಅಲ್ಲಿ ಸ್ಪರ್ಧೆಗಳು ಬೇಕೇ ಬೇಕು ಆಗ ಮಾತ್ರ ಯಶಸ್ಸನ್ನು ಹೊಂದಲು ಸಾಧ್ಯ ಎಂದು ಹೇಳಿದರು.
ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು 500ಕ್ಕಿಂತಲೂ ಅಧಿಕ ಜನ ಸೇರಿಸಿಕೊಂಡು ಈ ಹುಲಿವೇಷ ವನ್ನು ಅದ್ದೂರಿಯಾಗಿ ಮಾಡುತ್ತಾ ಬಂದಿದೆ ಸಂಘಟನೆ. ಬೇರೆ ಬೇರೆ ಸಾಮಾಜಿಕ ಹಾಗೂ ಅಸಕ್ತರಿಗೆ ಆರ್ಥಿಕ ಸಹಕಾರವನ್ನು ನೀಡುತ್ತಾ ಗಮನಸೆಳೆದಿದೆ ಎಂದರು.
ಸರ್ವೋದಯ ಫ್ರೆಂಡ್ಸ್ ನ ಅಧ್ಯಕ್ಷ ಗುರು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಪುರಸಭಾ ಸದಸ್ಯ ರಾಜೇಶ್ ನಾಯ್ಕ್, ಉದ್ಯಮಿ ರಾಜೇಶ್ ಕೋಟೆಗಾರ್, ಮಂಡಲದ ಯುವಮೋರ್ಚಾ
ಅಧ್ಯಕ್ಷ ಕುಮಾರ್ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಅತಿಥಿಗಳಾಗಿ ಭಾಗವಹಿಸಿದ್ದರು.
ಅಕ್ಷಯ್ ಜೈನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
0 Comments