ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ-25ನೇ ವರ್ದಂತಿ ಉತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ-25ನೇ ವರ್ದಂತಿ ಉತ್ಸವ


• ಗುರುವಂದನೆ   *ತಾಳಮದ್ದಳೆ

 ಮೂಡುಬಿದಿರೆ: ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪಟ್ಟಾಭಿಷೇಕ 25ನೇ ವರ್ದಂತಿ ಉತ್ಸವದಂಗವಾಗಿ ಮಹಾವೀರ ಭವನದಲ್ಲಿ ಗುರುವಾರ ನಡೆದ ಗುರುವಂದನೆ ಕಾರ್ಯಕ್ರಮ ನಡೆಯಿತು.

ವಿದ್ವಾಂಸ ಡಾ.ಪ್ರಭಾಕರ ಜೋಶಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿನಯಾಂಜಲಿ ಸಲ್ಲಿಸಿ ಮಾತನಾಡಿ ಭಟ್ಟಾರಕ ಪರಂಪರೆ ಈ ಭಾಗದಲ್ಲಿ ವಿಶೇಷವಾದದ್ದು. ಮೂಡುಬಿದಿರೆಯ ಭಟ್ಟಾರಕ ಸ್ವಾಮೀಜಿಯವರು ಕೇವಲ ಜೈನ ಧರ್ಮದ ಸ್ವಾಮೀಯಲ್ಲ. ಅವರು ಜೈನಧರ್ಮದ ವಿಶಾಲ ಮನೋಭಾವನೆಯೊಂದಿಗೆ ಸಾಮರಸ್ಯ ಸಮಾಜದ ಸಮನ್ವಯಾಚಾರ್ಯರು. ಭಾರತೀಯ ಧಾರ್ಮಿಕ ಪರಂಪರೆಯ ಸಂತ ಎಂದ ಅವರು

   ತಮ್ಮ ವರ್ದಂತಿ ಉತ್ಸವವನ್ನು ಆಡಂಬರದಿಂದ ಆಚರಿಸದೆ, ಪುರಾತನ ಜಿನ ಚೈತ್ಯಾಲಯದ ಜೀರ್ಣೋದ್ಧಾರ, 25 ತಾಳಮದ್ದಳೆ ಸರಣಿ ಕಾರ್ಯಕ್ರಮ, ಪ್ರಾಚೀನ, ಅಪರೂಪದ ಗ್ರಂಥಗಳಿರುವ ರಮಾರಾಣಿ ಶೋಧ ಸಂಸ್ಥಾನಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವುದು ಅರ್ಥಪೂರ್ಣ ಆಚರಣೆ ಎಂದರು.

ಭಟ್ಟಾರಕ ಸ್ವಾಮೀಜಿಯವರು ಶ್ರಾವಕ, ಶ್ರಾವಕಿಯರಿಗೆ ಆಶೀರ್ವಾದಯಿತ್ತರು.

ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್ ಕುಮಾರ್,

ಆದರ್ಶ, ಎ.ಸುದೀಶ್ ಕುಮಾರ್ ಬೆಟ್ಕೇರಿ, ಚೌಟರ ಅರಮನೆಯ ಕುಲದೀಪ ಎಂ.,ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ , ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ.,  ಧಾರ್ಮಿಕ ಮುಖಂಡರಾದ ಧನಕೀರ್ತಿ ಬಲಿಪ,  ಶೈಲೇಂದ್ರ ಕುಮಾರ್, ಕೃಷ್ಣರಾಜ ಹೆಗ್ಡೆ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಡಾ.ಎಸ್.ಪಿ ವಿದ್ಯಾಕುಮಾರ್, ಉಮಾನಾಥ ಶೆಣೈ, ಜಯಪ್ರಕಾಶ್ ಪಡಿವಾಳ್, ಸುಭಾಶ್ಚಂದ್ರ ಚೌಟ, ಉಪಸ್ಥಿತರಿದ್ದರು.

ನೇಮಿರಾಜ್ ಕಾರ್ಯಕ್ರಮ ನಿರೂಪಿಸಿದರು.

ಅಹಿಂಸ ವಿಜಯ ಹಾಗೂ ತ್ರಿಶಂಕು ಸ್ವರ್ಗ ತಾಳಮದ್ದಳೆ ನಡೆಯಿತು‌.

Post a Comment

0 Comments