ವಿಹೆಚ್ ಪಿ ಷಷ್ಠಿಪೂರ್ತಿ ಸಂಭ್ರಮ :
ಆ.31ರಂದು ಮೂಡುಬಿದಿರೆಯಲ್ಲಿ ಸಮಾರೋಪ
ಮೂಡುಬಿದಿರೆ: ವಿಶ್ವಹಿಂದು ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಕಾರ್ಯಕ್ರಮವು ಆ.31 ಶನಿವಾರದಂದು ಸಂಜೆ ೭.೩೦ ಕ್ಕೆ ಮೂಡುಬಿದಿರೆ ಕನ್ನಡಭವನದಲ್ಲಿ ಜರುಗಲಿದೆ ಎಂದು ವಿಹೆಚ್ ಪಿ ಕಾರ್ಯಧ್ಯಕ್ಷ ಶ್ಯಾಮ ಹೆಗ್ಡೆ ತಿಳಿಸಿದರು.
ಅವರು ಗುರುವಾರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ೧೯೬೪ ನೇ ಇಸವಿಯ ಶ್ರೀ ಕೃಷ್ಣ ಜನ್ಮಷ್ಟಮಿಯಂದು ಮಹಾರಾಷ್ಟ್ರದ ಸಾಂದೀಪನೀ ಆಶ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಸಂಘ ಚಾಲಕರಾದ ಶ್ರೀ ಗುರೂಜಿಯವರ ಮಾರ್ಗದರ್ಶನದಿಂದ ಪೇಜಾವರ ಮಠಾಧೀಶರ ಉಪಸ್ಥಿತಿಯಲ್ಲಿ ಸ್ಥಾಪಿಸಲ್ಪದ್ದ ವಿಶ್ವಹಿಂದು ಪರಿಷತ್ ಇದೀಗ ಷಷ್ಠಿಪೂರ್ತಿ ಸಂಭ್ರಮದಲ್ಲಿದೆ.
ಸಮಸ್ತ ಹಿಂದೂ ಸಮಾಜದ ಅಸಮಾನತೆಯ ಭಾವನೆಯನ್ನು ತೊಲಗಿಸಿ ನಾವೆಲ್ಲ ಹಿಂದು ನಾವೆಲ್ಲ ಬಂಧು ನಾವೆಲ್ಲ ಒಂದು ಎಂಬ ಹರಿಕಲ್ಪನೆ ಮೂಡಿಸಿ ವಿಶ್ವದಲ್ಲೆಡೆ ಸನಾತನ ಧರ್ಮದ ಹಿರಿಮೆಯನ್ನು ಪಸರಿಸಿ ಸಂರಕ್ಷಣೆಯನ್ನು ಮಾಡಿ ನಿರಂತರ ಸೇವೆ ಸಲ್ಲಿಸುತ್ತಾ ಬರುತ್ತಿದೆ.
ಸಮಾರೋಪ ಸಮಾರಂಭದಲ್ಲಿ ವಿಶ್ವಹಿಂದು ಪರಿಷತ್ ನ ಮೂಡುಬಿದಿರೆ ಪ್ರಖಂಡದ ಅಧ್ಯಕ್ಷ ವಿಶ್ವನಾಥ ಪ್ರಭು ಅವರ ಸಭಾಧ್ಯಕ್ಷತೆಯಲ್ಲಿ ಜೈನಮಠದ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ವಿಶ್ವಹಿಂದು ಪರಿಷತ್‌ನ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು ಬೌದ್ಧಿಕ ನೀಡಲಿದ್ದು ಡಾ ಮೋಹನ್ ಆಳ್ವ, ದೇವಿಪ್ರಸಾದ್ ಶೆಟ್ಟಿ, ಶ್ಯಾಮ ಹೆಗ್ಡೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ವಿಹೆಚ್ ಪಿ ಉಪಾಧ್ಯಕ್ಷ ಶಾಂತರಾಮ ಕುಡ್ವ,
ಪ್ರಧಾನ ಕಾರ್ಯದರ್ಶಿ ಸುಚೇತನ ಜೈನ್,
ಸೇವಾ ಪ್ರಮುಖ್ ಶೇಖರ ಪುತ್ತಿಗೆ ಉಪಸ್ಥಿತರಿದ್ದರು.
0 Comments