ಹಿಂದೂ ಸಮಾಜದ ಒಗ್ಗಟ್ಟಿನಿಂದ ಮಾತ್ರ ಅಖಂಡ ಭಾರತ ಸಾಧ್ಯ : ಆಶಿಕ್ ಗೋಪಾಲಕೃಷ್ಣ
ಮೂಡುಬಿದಿರೆ: ಕಾಂಗ್ರೆಸ್ ನ ತುಷ್ಠೀಕರಣದ ನೀತಿಯಿಂದಾಗಿ ಭಾರತ ಅಂದು ವಿಭಜನೆಯಾಗಿತ್ತು. ತ್ರಿಖಂಡವಾಗಿರುವ ಭಾರತವನ್ನು ಮತ್ತೆ ಅಖಂಡವಾಗಿಸಬೇಕಾದರೆ ಜಾತಿ, ಭಾಷೆ, ಧರ್ಮ ಎಂದು ಬೇರೆ ಬೇರೆಯಾಗಿ ಹಂಚಿ ಹೋಗಿರುವ ಹಿಂದೂ ಸಮಾಜ ಒಗ್ಗಟ್ಟಾದಾಗ ಮಾತ್ರ ತ್ರಿಖಂಡವಾಗಿರುವ ಭಾರತವನ್ನು ಅಖಂಡವಾಗಿ ರೂಪಿಸಬಹುದು ಎಂದು ವಿಹಿಂಪ ಮಂಗಳೂರು ಜಿಲ್ಲಾ ಪ್ರಚಾರ ಮತ್ತು ಪ್ರಸಾರ ಪ್ರಮುಖ್ ಆಶಿಕ್ ಗೋಪಾಲಕೃಷ್ಣ ಕರೆ ನೀಡಿದರು.
ಅವರು ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಿಹಿಂಪ ಮತ್ತು ಬಜರಂಗದಳ ಮೂಡುಬಿದಿರೆ ಇದರ ವತಿಯಿಂದ ಬುಧವಾರ ಸಂಜೆ ನಡೆದ ಪಂಜಿನ ಮೆರವಣಿಗೆಯ ಅಂಗವಾಗಿ ಸಮಾಜ ಮಂದಿರದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಅಂದಿನ ಕಾಂಗ್ರೆಸ್ ಸ್ಥಾಪನೆಯಾದಾಗ ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕು ಎಂಬ ಉದ್ದೇಶವಿತ್ತು ಆದರೆ ಸ್ವಾತಂತ್ರ್ಯ ಸಿಕ್ಕಿದ ನಂತರ ನಾಯಕರ ಅಧಿಕಾರದ ಆಸೆ ದೇಶದ ಮೇಲೆ ಪರಿಣಾಮ ಬೀರಿತು. ಮುಸ್ಲಿಂ ಲೀಗ್ ಸ್ಥಾಪನೆಯಾದ ನಂತರ ಭಾರತ ತ್ರಿಖಂಡವಾಗಿ ಬದಲಾವಣೆಯಾಯಿತು. ಅಂದಿನಿಂದ ಬಾಂಗ್ಲಾದದಲ್ಲಿ ಅಲ್ಪಸಂಖ್ಯಾತರಾಗಿದ್ದ ಹಿಂದೂಗಳ ಸ್ಥಿತಿ ಶೋಚನೀಯವಾಯಿತು. ಪಾಕಿಸ್ಥಾನದಲ್ಲು ಹಿಂದೂಗಳ ಸ್ಥಿತಿ ಕೆಳಮಟ್ಟದಲ್ಲಿದೆ ಆದರೆ ಇದ್ಯಾವುದೂ ನಮ್ಮ ಪಠ್ಯಪುಸ್ತಕದಲ್ಲಿ ಇಲ್ಲ ಆದ್ದರಿಂದ ಯಾರಿಗೂ ಇತಿಹಾಸ ತಿಳಿದಿಲ್ಲವೆಂದು ಎಂದು ಕಳವಳ ವ್ಯಕ್ತಪಡಿಸಿದರು.
ಬಜರಂಗದಳದ ಪ್ರಖಂಡ ಸಂಚಾಲಕ ಅಭಿಲಾಶ್ ಅರ್ಜುನಾಪುರ ಅಧ್ಯಕ್ಷತೆ ವಹಿಸಿದ್ದರು.
ವಿಹಿಂಪದ ಪ್ರಖಂಡ ಕಾರ್ಯದರ್ಶಿ ಸುಚೇತನ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯದ ಮೊದಲು ಸಾವಿರ ಕಂಬದ ಬಸದಿಯಿಂದ ಸಮಾಜ ಮಂದಿರದ ತನಕ ಪಂಜಿನ ಮೆರವಣಿಗೆ ನಡೆಯಿತು.
0 Comments