ನಮ್ಮ ಶ್ರಮ ಸಾರ್ಥಕವಾಗಿದೆ:ಅಳಿಯೂರು ಪಿ.ಯು. ವಿದ್ಯಾರ್ಥಿಗಳನ್ನು ಕಂಡು ಶಾಸಕ ಕೋಟ್ಯಾನ್ ಹರ್ಷ
ಮೂಡುಬಿದಿರೆ ತಾಲೂಕಿನಲ್ಲಿರುವ ಎರಡನೇ ಪದವಿಪೂರ್ವ ಕಾಲೇಜು ಅಳಿಯೂರು ಇಲ್ಲಿಗೆ ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೋಟ್ಯಾನ್ ರವರು ಭೇಟಿ ನೀಡಿದರು. ಅಳಿಯೂರು ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ನಡೆದಿದ್ದ ನಡೆದ ಸರ್ಕಾರದಿಂದ ಉಚಿತವಾಗಿ ಕೊಡಲ್ಪಡುವ ಶೂ ಸಾಕ್ಸ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರು ಈ ಸಂದರ್ಭದಲ್ಲಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು ಕಳೆದ ಬಾರಿ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಂಡು ಬೇಸರ ಎನಿಸಿತ್ತು. ಆದರೆ ಈ ಬಾರಿ ನಮ್ಮ ಶ್ರಮ ಸಾರ್ಥಕ ಎನಿಸುತ್ತಿದೆ. ಉತ್ತಮ ಸಂಖ್ಯೆಯ ವಿದ್ಯಾರ್ಥಿಗಳು ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವುದು ಗಮನಿಸಿದಾಗ ಅತೀವ ಸಂತಸವಾಯಿತು ಎಂದು ಹೇಳಿದರು.
ಮೂಡಬಿದಿರೆಯ ಅಳಿಯೂರಿನಲ್ಲಿ ಪದವಿಪೂರ್ವ ಕಾಲೇಜು ಆಗಬೇಕೆಂಬ ಅನೇಕ ವರ್ಷಗಳ ಬೇಡಿಕೆಯನ್ನು ಶಾಸಕರು ಕಳೆದ ಎರಡು ವರ್ಷಗಳ ಹಿಂದೆ ಈಡೇರಿಸಿದ್ದರು. ಈ ನಿಮಿತ್ತ ಶಾಸಕರು ಹಲವಾರು ಯೋಜನೆಗಳನ್ನು ತಂದು ಕೊಠಡಿಗಳ ಸಹಿತ ಮೂಲಭೂತ ಸೌಕರ್ಯಗಳ ಬಗ್ಗೆ ಆಸಕ್ತಿವಹಿಸಿ ಕೆಲಸ ಮಾಡಿದ್ದರು. ಆದರೆ ಕಳೆದ ವರ್ಷದ ದಾಖಲಾತಿ ಕಂಡು ಬೇಸರಗೊಂಡಿದ್ದ ಶಾಸಕರು ಈ ಬಾರಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳ ಶಿಕ್ಷಣ ಶಾಸಕರಿಗೆ ಸಮಾಧಾನ ಹಾಗೂ ಸಂತಸ ತಂದಿದೆ.
0 Comments