ಮಳೆ ಹಾನಿ : ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಗುಡ್ಡ ಕುಸಿತ, ಮನೆಗಳಿಗೆ‌ ಹಾನಿ

ಜಾಹೀರಾತು/Advertisment
ಜಾಹೀರಾತು/Advertisment

 ಮಳೆ ಹಾನಿ : ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಗುಡ್ಡ ಕುಸಿತ, ಮನೆಗಳಿಗೆ‌ ಹಾನಿ

ಮೂಡುಬಿದಿರೆ: ಗುರುವಾರ ಮುಂ ಸುರಿದ ಮಳೆಗೆ ಪುತ್ತಿಗೆ ಗ್ರಾ.ಪಂಚಾಯತ್ ವ್ಯಾಪ್ತಿಯ ಹಂಡೇಲಿನಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ.

 ಹಂಡೇಲು- ಮುಂಡೇಲಿನ ಝೀನತ್ ಅವರ ಮನೆಗೆ ಗುಡ್ಡ ಕುಸಿದು, ಜಮೀಲ ಮತ್ತು ಅಸ್ಮತ್, ಜೈನಾಬು ಅವರ ಮನೆಗೆ ಮಣ್ಣು ಕುಸಿದು ಬಿದ್ದು ಹಾನಿಯಾಗಿದೆ.


 ಮೈಮೂನ, ಮೊಹಮ್ಮದ್, ಅಬ್ದುಲ್ ಹಮೀದ್, ಮುಂಡೇಲಿನ ಅಬೂಬಕ್ಕರ್,ಗಿಡ್ಡಬೆಟ್ಟು ಶಾರದಾ  ಅವರ ಮನೆಯ ಕಂಪೌಂಡ್ ಕುಸಿದು ಬಿದ್ದು ಹಾನಿಯಾಗಿದೆ.

 ಹಾನಿಗೊಳಗಾಗಿರುವ ಸ್ಥಳಕ್ಕೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಭೀಮ ನಾಯಕ್ ಬಿ.ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ  ಅಪಾಯದಲ್ಲಿರುವ ಕುಟುಂಬದವರಿಗೆ ಪುತ್ತಿಗೆ ಪಂಚಾಯತ್  ಸಭಾಭವನದಲ್ಲಿ ತೆರೆದಿರುವ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ತಿಳಿಸಿದ್ದಾರೆ.

Post a Comment

0 Comments