ಪಾಲಡ್ಕ ಗ್ರಾ.ಪಂ.ವ್ತಾಪ್ತಿಯಲ್ಲಿ ಗದ್ದೆ, ತೋಟ, ರಸ್ತೆ ಜಲಾವೃತ
ಮೂಡಬಿದಿರೆ: ತಾಲೂಕಿನಲ್ಲಿ ಬೀಳುತ್ತಿರುವ ಅಧಿಕ ಮಳೆಯ ಪ್ರಭಾವದಿಂದ ಪಾಲಡ್ಕ ಗ್ರಾ.ಪಂಚಾಯತ್ ವ್ಯಾಪ್ತಿಯ ಕಡಂದಲೆಯಲ್ಲಿ ಗದ್ದೆಗಳು, ತೋಟ ಮತ್ತು ಮನೆಗಳು ಜಲಾವೃತಗೊಂಡು ಜನ ಸಂಚಾರಕ್ಕೆ ತೊಂದರೆಯಾಗಿದೆ.
ಕಳೆದೆರಡು ದಿನಗಳಿಂದ ಮಳೆಯು ಎಡೆಬಿಡದೆ ಸುರಿಯುತ್ತಿರುವುದರಿಂದ ಗುಡ್ಡಬೆಟ್ಟು ತುಲಮೊಗೇರ್ ಬಿತ್ತಿದ ಗದ್ದೆಗಳು ನೀರುಪಾಲಾಗಿದೆ. ಕಡಂದಲೆಯಲ್ಲಿ ತೋಟ, ಗದ್ದೆ, ರಸ್ತೆ ಜಲಾವೃತಗೊಂಡಿದೆ.
ನಾಟಿ ಮಾಡಿದ ಭತ್ತದ ಬೆಳೆ ನದಿ ಪಾಲಾಗಿದೆ.
ಕಲ್ಲೋಳಿ ಪ್ರದೇಶದಲ್ಲಿ ರಸ್ತೆಗೆ ನದಿ ನೀರು ಬಂದಿರುವುದರಿಂದ ಪಾದಾಚಾರಿಗಳಿಗೆ ರಸ್ತೆ ದಾಟಲು ಕಷ್ಟವಾಗಿದೆ. ಸಂಜೆ ವೇಳೆಗೆ ಡೈರಿಗೆ ಹಾಲು ಹಾಕುವವರು ಹೋಗುವವರು ಸುತ್ತು ಬಳಸಿ ಹೋಗಬೇಕಾಗಿದೆ.
ಶಾಂಭವಿ ನದಿಯಲ್ಲೂ ನೀರಿನ ಮಟ್ಟ ಹೆಚ್ಚಾಗಿದ್ದು ಪಕ್ಕದಲ್ಲಿರುವ ಅಡಿಕೆ ತೋಟಗಳಲ್ಲಿ ನೀರು ತುಂಬಿಕೊಂಡಿದೆ.ನಲ್ಲೆಗುತ್ತು ನದಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಮಡಿಕೆ ಯಶೋದಾ ಪೂಜಾರ್ತಿ ಅಕ್ಕನಿ ಸಪಳಿಗ ಮಡಿಕೆ ಭೋಜ ಪೂಜಾರಿ ಯವರ ಮನೆಯ ಒಳಗೆ ನೀರು ತುಂಬಿದೆ.ನಲ್ಲೆಗುತ್ತು ನದಿ ಮುಳುಗಿದ ಕಾರಣ ಮೂಡುಬಿದಿರೆ ಪೊಲೀಸರು ಬ್ಯಾರಿಕ್ಯಾಡ್ ಹಾಕಿ ಜನರಿಗೆ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.
ಜಲಾವೃತಗೊಂಡಿರುವ ಪ್ರದೇಶಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಕ್ಷಿತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 Comments