ನಳಿನ್ ಜೊತೆ ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು-ಜನರ ನಿಯಂತ್ರಣಕ್ಕೆ ಮಾಜಿ ಎಂಪಿ ಮುನಿಸ್ವಾಮಿ ಹರಸಾಹಸ-ಪಾದಯಾತ್ರೆಯಲ್ಲಿ ವ್ಯಕ್ತವಾದ ಅಭಿಮಾನ

ಜಾಹೀರಾತು/Advertisment
ಜಾಹೀರಾತು/Advertisment

 ನಳಿನ್ ಜೊತೆ ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು-ಜನರ ನಿಯಂತ್ರಣಕ್ಕೆ ಮಾಜಿ ಎಂಪಿ ಮುನಿಸ್ವಾಮಿ ಹರಸಾಹಸ-ಪಾದಯಾತ್ರೆಯಲ್ಲಿ ವ್ಯಕ್ತವಾದ ಅಭಿಮಾನ


ಮೂಡ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಮತ್ತು ಜನತಾದಳ ಪಕ್ಷಗಳು ಹಮ್ಮಿಕೊಂಡಿರುವ ಬೆಂಗಳೂರುನಿಂದ ಮೈಸೂರಿಗೆ ಬೃಹತ್ ಪಾದಯಾತ್ರೆ ಕಾರ್ಯಕ್ರಮದಲ್ಲಿ ನಿಕಟಪೂರ್ವ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಮಂಗಳೂರಿನ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಆಗಸ್ಟ್ 5ರಂದು ಪಾಲ್ಗೊಂಡರು.



ನಳಿನ್ ಕುಮಾರ್ ಕಟೀಲ್ ರವರು ಊಟದ ಚಪ್ಪರಕ್ಕೆ ಬಂದ ಕೂಡಲೇ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಘೋಷಣೆ ಕೂಗಲಾರಂಭಿಸಿದ ಕಾರ್ಯಕರ್ತರ ನಡುವೆ ನಳಿನ್ ಸಿಲುಕಿಕೊಂಡ ಪ್ರಸಂಗ ನಡೆಯಿತು. ನಳಿನ್ ಕುಮಾರ್ ಕಟೀಲು ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಕಾರ್ಯಕರ್ತರು ಮುಗಿಬಿದ್ದಿದ್ದರಿಂದ ಊಟದ ಚಪ್ಪರದ ಬಳಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಕರ್ತರ ಮಧ್ಯದಲ್ಲಿ ನಿಂತಿದ್ದರು. 



ನಂತರ ಪಾದಯಾತ್ರೆಯುದ್ಧಕ್ಕೂ ಅವರ ಜೊತೆಗೆ ಫೋಟೋಗೆ ಮುಗಿಬಿದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಸಂಸದ ಮುನಿಸ್ವಾಮಿ ಹಾಗೂ ಇತರರು ಹರಸಾಹಸಪಟ್ಟಿದ್ದಾರೆ. 



ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ ಪರವಾಗಿಯೂ ಭಾರೀ ಅಭಿಮಾನ ವ್ಯಕ್ತವಾಗಿದ್ದು ಪ್ರತಾಪ್ ಸಿಂಹ ಜೊತೆಗೆ ಅನೇಕ ಕಾರ್ಯಕರ್ತರು ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದರು ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ ಹಾಗೂ ಮುನಿಸ್ವಾಮಿ ರವರಿಗೆ ಭಾರೀ ಜನಪ್ರಿಯತೆ ಹೆಚ್ಚಾಗಿರುವುದು ಕಂಡುಬರುತ್ತದೆ. ಯಾವುದೇ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸದೆ ಟಿಕೆಟ್ ಸಿಗದಿದ್ದರೂ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ನಾಯಕರ ಬಗ್ಗೆ ಕಾರ್ಯಕರ್ತರಿಗೆ ಮತ್ತಷ್ಟು ಅಭಿಮಾನ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

Post a Comment

0 Comments