ಮಳೆ ಅವಾಂತರ: ಶಿರ್ತಾಡಿ ಮನೆಗಳಿಗೆ ಹಾನಿ

ಜಾಹೀರಾತು/Advertisment
ಜಾಹೀರಾತು/Advertisment

 ಮಳೆ ಅವಾಂತರ: ಶಿರ್ತಾಡಿ ಮನೆಗಳಿಗೆ ಹಾನಿ


ಮೂಡುಬಿದಿರೆ: ಶಿರ್ತಾಡಿ ಗ್ರಾ.ಪಂಚಾಯತ್ ವ್ಯಾಪ್ತಿಯಲ್ಲಿ ಬುಧವಾರ ಸುರಿದ  ಮಳೆಯ ಅವಾಂತರದಿಂದ ಪಚ್ಚಾಡಿ ಸಂತೋಷ್ ಅವರ ಮನೆ   ಸಂಪೂರ್ಣವಾಗಿ ಧರೆಗುರುಳಿ ನಷ್ಟ ಸಂಭವಿಸಿದೆ.


 ಕಜೆ  ಲಾಂಬುದೇಲು ಕರಿಯ ಪೂಜಾರಿಯವರ ಮನೆಗೆ ಪಕ್ಕದ ಗುಡ್ಡ ಜರಿದು ಬಿದ್ದು ಹಾನಿಯಾಗಿದೆ.

 

ಮನೆ ಹಾನಿಯಿಂದಾಗಿ ಅವರಿಗೆ ಪಕ್ಕದ ಪ್ರದೇಶದಲ್ಲಿ ವಾಸ್ತವ್ಯಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.


ಪಂಚಾಯತ್  ಅಧ್ಯಕ್ಷೆ ಆಗ್ನೇಶ್ ಡಿಸೋಜಾ, ಸದಸ್ಯ ಎಸ್. ಪ್ರವೀಣ್ ಕುಮಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment

0 Comments