ಮೂಡುಬಿದಿರೆಯಲ್ಲಿ ನಾಳೆ "ನಾಗಸಿರಿ" ಯಕ್ಷಗಾನ
ನಾಳೆ (ಆ.3)ಮೂಡುಬಿದಿರೆಯಲ್ಲಿ "ನಾಗಸಿರಿ" ಯಕ್ಷಗಾನ ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ಯಕ್ಷಮಿತ್ರರು ಮೂಡುಬಿದಿರೆ ಆಶ್ರಯದಲ್ಲಿ 'ಬನತ ಬಾಲೆ' ಖ್ಯಾತಿಯ ಗಣೇಶ್ ಬಿ.ಅಳಿಯೂರು ಅವರ ನೂತನ ಕಲಾ ಕಾಣಿಕೆ "ನಾಗಸಿರಿ" ಎಂಬ ಯಕ್ಷಗಾನವು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಭಾಗವತರಾದ ಕರುಣಾಕರ ಶೆಟ್ಟಿಗಾರ್ ಅವರ ಸಂಯೋಜನೆಯಲ್ಲಿ ನಾಳೆ ಸಂಜೆ 5 ರಿಂದ ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಯಕ್ಷರಂಗದ ಹಿರಿಯ ಕಲಾವಿದ ಮಿಜಾರು ತಿಮ್ಮಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮ,ಮೂಡುಬಿದಿರೆ ಪುರಸಭೆಯ ಹಿರಿಯ ಪೌರಕಾರ್ಮಿಕ ಬೊಗ್ಗು ಹಾಗೂ ಸಮಾಜ ಸೇವಕರಾದ ಅನಿಲ್ ಮೆಂಡೋನ್ಸ, ಫಯಾಝ್ ಮಾಡೊರು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಅತಿಥಿ ಕಲಾವಿದರಾಗಿ ತುಳುವ ಮಾಣಿಕ್ಯ ಅರವಿಂದ ಬೋಳಾರ್, ದಿನೇಶ್ ಕೊಡಪದವು, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದು ಉದ್ಯಮಿ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಸಚಿವ ಕೆ.ಅಭಯಚಂದ್ರ, ಮಿಥುನ್ ರೈ, ಮೋಹನ್ ಆಳ್ವ, ಸುದರ್ಶನ್ ಎಂ., ಪ್ರೇಮನಾಥ ಮಾರ್ಲ, ಹರ್ಷವರ್ಧನ ಪಡಿವಾಳ್, ಈಶ್ವರ ಭಟ್, ರಂಜಿತ್ ಪೂಜಾರಿ, ಸುರೇಶ್ ಶೆಟ್ಟಿ, ಇರ್ಫಾನ್ ಯು.ಕೆ, ಅಶ್ವಿನ್ ಪಿರೇರ, ಶೇಖರ್ ಬೊಳ್ಳಿ, ಅಶ್ವಥ್ ಪಣಪಿಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರಾದ ಹರೀಶ್ ದೇವಾಡಿಗ ಹಾಗೂ ನಾಗೇಶ್ ಬಂಗೇರ ಅವರು ತಿಳಿಸಿದ್ದಾರೆ.
0 Comments